ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದ ಶತಾಯುಷಿ ತಿಪ್ಪಮ್ಮ

7

ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದ ಶತಾಯುಷಿ ತಿಪ್ಪಮ್ಮ

Published:
Updated:
Prajavani

ನೆಲಮಂಗಲ: ‘ನಮ್ಮ ಜೀವನದಲ್ಲಿ ಮನೆಯ ಮತ್ತು ಹೊಲದ ಎಲ್ಲ ಕೆಲಸವನ್ನು ಜಾನಪದ, ಗೀಗೀ ಪದ ಹಾಡುತ್ತಾ ಮಾಡುತ್ತಿದ್ದೆವು. ಹೀಗೆ ನಮಗೆ ಮನರಂಜನೆ, ವ್ಯಾಯಾಮ, ಕ್ರೀಡೆ ಎಲ್ಲವೂ ಆಗಿಹೋಗುತ್ತಿತ್ತು’ ಎಂದು ಶತಾಯುಷಿ ತಿಪ್ಪಮ್ಮ(101) ನೆನಪಿಸಿಕೊಂಡರು.

ಇಲ್ಲಿಗೆ ಸಮೀಪದ ನಂದರಾಮಯ್ಯನಪಾಳ್ಯದ ಬ್ಲೂಮೂನ್‌ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟದ ಧ್ವಜಾರೋಹಣ ಮತ್ತು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ‘ಇಂದು ಮನೆಯಲ್ಲಿ ಏನೂ ಕೆಲಸ ಮಾಡದೆ, ಹೊರಗೆ ಎಲ್ಲವನ್ನೂ ದುಡ್ಡುಕೊಟ್ಟು ಪಡೆಯುವ ದೌರ್ಭಾಗ್ಯ ಎದುರಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಲೆಯ ಕಾರ್ಯದರ್ಶಿ ಸಿ.ಎನ್‌.ಚಂದ್ರಶೇಖರ್‌ ಮಾತನಾಡಿ, ‘ತಿಪ್ಪಮ್ಮ ಅವರ ಮೊಮ್ಮಗು ನಮ್ಮ ಶಾಲೆಯ ವಿದ್ಯಾರ್ಥಿ. ಅವರಿಂದಲೇ ಕ್ರೀಡಾಕೂಟಕ್ಕೆ ಚಾಲನೆ ದೊರೆತರೆ ಪ್ರತ್ಯಕ್ಷ ನಿದರ್ಶನದೊಂದಿಗೆ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದಂತಾಗುತ್ತದೆ’ ಎಂದರು.

ಮಾದನಾಯಕನಹಳ್ಳಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಪ್ರಕಾಶ್‌ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿದರು. ಹಿರಿಯರಿಗೆ, ಪೋಷಕರಿಗೂ ವಿವಿಧ ಸ್ಪರ್ಧೆ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !