‘ಮೊಬೈಲ್‌ ನಿಂದ ಓದಿನ ಆಸಕ್ತಿಗೆ ಕುತ್ತು’

ಬುಧವಾರ, ಏಪ್ರಿಲ್ 24, 2019
29 °C

‘ಮೊಬೈಲ್‌ ನಿಂದ ಓದಿನ ಆಸಕ್ತಿಗೆ ಕುತ್ತು’

Published:
Updated:

ಕೆ.ಆರ್.ಪುರ: ‘ಅತಿಯಾದ ಮೊಬೈಲ್ ಬಳಕೆಯಿಂದಾಗಿ ಇಂದಿನ ವಿದ್ಯಾರ್ಥಿಗಳು ಓದುವ ಆಸಕ್ತಿಯನ್ನೆ ಕಳೆದುಕೊಳುತ್ತಿದ್ದಾರೆ’ ಎಂದು ಪಿ.ಇ.ಎಸ್ ವಿಶ್ವವಿದ್ಯಾಲಯದ ಕುಲಪತಿ ಕೆ.ಎನ್.ಬಾಲಸುಬ್ರಹ್ಮಣ್ಯ ಮೂರ್ತಿ ಆತಂಕ ವ್ಯಕ್ತಪಡಿಸಿದರು.

ಕೆ.ಆರ್.ಪುರದ ಕೆಂಬ್ರಿಜ್‌ ತಾಂತ್ರಿಕ ಮಹಾವಿದ್ಯಾಲಯವು, ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ(ಸಿಎಸ್ಐ) ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ತಂತ್ರಜ್ಞಾನ ಬಳಕೆಯಿಂದ ಮನುಷ್ಯನ ಜೀವಿತಾವಧಿ ಹೆಚ್ಚಾಗಿದ್ದು. ಬಹುತೇಕರು ದುಡಿಯಲು ಶಕ್ತರಾಗಿದ್ದಾರೆ. ಅದಕ್ಕೆ ತಕ್ಕಂತೆ ಆಧುನಿಕವ್ಯವಸ್ಥೆಗಳನ್ನು ರೂಪಿಸಬೇಕಾಗಿದೆ’ ಎಂದರು. 

‘ಇಂದಿನ ಪಠ್ಯ ವ್ಯವಸ್ಥೆಯಲ್ಲಿ ಯೋಚನಾ ವಿಧಾನಗಳು ಇಲ್ಲ. ವಿದ್ಯಾರ್ಥಿಗಳ ಅಧ್ಯಯನ ಸಮಯವು ದಿನಕ್ಕೆ ನಾಲ್ಕು ಗಂಟೆ ಇದ್ದದ್ದು, ಈಗ ಮೊಬೈಲ್‌ಗಳಿಂದಾಗಿ ವಾರಕ್ಕೆ ನಾಲ್ಕು ಗಂಟೆಗೆ ಇಳಿದಿದೆ’ ಎಂದರು.  

ಕೆಂಬ್ರಿಜ್‌ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಿ.ಕೆ.ಮೋಹನ್‌ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !