ಬುಧವಾರ, ನವೆಂಬರ್ 20, 2019
24 °C
ಪರಿಸರಸ್ನೇಹಿ ಪರಿಕರ ಮೇಳ ಸಂಪನ್ನ

ಎರಡು ಲಕ್ಷ ಬಟ್ಟೆ ಚೀಲಗಳಿಗೆ ಬೇಡಿಕೆ

Published:
Updated:

ಬೆಂಗಳೂರು: ನಿಷೇಧಿತ ಪ್ಲಾಸ್ಟಿಕ್‌ನಿಂದ ವಸ್ತುಗಳಿಗೆ ಪರ್ಯಾಯವಾಗಿ ಉಪಯೋಗಿಸಬಹುದಾದ ಪರಿಸರ ಸ್ನೇಹಿ ಪರಿಕರ ಬಳಕೆ ಬಗ್ಗೆ ಅರಿವು ಮೂಡಿಸಲು ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಬಿಎಂಪಿ ಆಯೋಜಿಸಿದ್ದ ಮೂರು ದಿನಗಳ ವಿಶೇಷ ಮೇಳ ಸಂಪನ್ನಗೊಂಡಿತು.

ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದ್ದ ಪರಿಸರ ಸ್ನೇಹಿ ವಸ್ತುಗಳ ಖರೀದಿಗೆ ಅಂಗಡಿ ಮಳಿಗೆ ವ್ಯಾಪಾರಿಗಳು ಹಾಗೂ ಹೋಟೆಲ್‌ ಮಾಲೀಕರು ಮುಗಿಬಿದ್ದರು.

‘ಮಳಿಗೆಯೊಂದರಲ್ಲಿ ಮಾರಾಟಕ್ಕಿದ್ದ ಬಟ್ಟೆ ಚೀಲಗಳಿಗೆ ಮಾರುಹೋದ ವ್ಯಾಪಾರಿಗಳು 2 ಲಕ್ಷಕ್ಕೂ ಅಧಿಕ ಚೀಲಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ’ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು. 

ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ್ದ ಚಿತ್ತಾರದ ಕೈಚೀಲಗಳಿಗೆ ಹಾಗೂ ಪೇಪರ್ ಬ್ಯಾಗ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂತು. 

ಪ್ರತಿಕ್ರಿಯಿಸಿ (+)