ಶನಿವಾರ, ಅಕ್ಟೋಬರ್ 19, 2019
28 °C

ಕಿದ್ವಾಯಿಯಲ್ಲಿ ‘ಆರೋಗ್ಯ’ ವನ

Published:
Updated:
Prajavani

ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗೆ ಆಸ್ಪತ್ರೆಯ ಆವರಣದಲ್ಲಿ ಆಹ್ಲಾದಕರ ವಾತಾವರಣ ಕಲ್ಪಿಸಲು 14 ಸಾವಿರ ಸಸಿಗಳನ್ನು ನೆಡಲು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಜತೆಗೆ ಬೆಂಗಳೂರು ಮಿಡ್‌ಟೌನ್‌ ರೋಟರಿ ಕ್ಲಬ್‌ ಕೈಜೋಡಿಸಿದೆ. ಕಿದ್ವಾಯಿ ಆವರಣದಲ್ಲಿ ಉದ್ಯಾನ ನಿರ್ಮಾಣ ಮಾಡುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

‘ಮೊದಲ ಹಂತದಲ್ಲಿ 4 ಸಾವಿರ ಸಸಿ ಬೆಳೆಸಲಾಗಿದೆ. ಔಷಧ ಗಿಡಗಳು, ಹೂವಿನ ಗಿಡಗಳು, ಮರದ ಜಾತಿಯ ಗಿಡಗಳನ್ನು ಬೆಳೆಸಲಾಗುವುದು’ ಎಂದು ಇಂಡಸ್‌ ಹರ್ಬ್ಸ್‌ನ ಟಿ.ಸಿ. ರವೀಂದ್ರ ತಿಳಿಸಿದರು. 

‘ಪ್ರತ್ಯೇಕ ಚಿಟ್ಟೆ ಉದ್ಯಾನವನ್ನು ಶಾಂತಿಧಾಮದ ಬಳಿ ಮಾಡಲಾಗುತ್ತದೆ. ಚಿಟ್ಟೆಗಳನ್ನು ಆಕರ್ಷಿಸುವ ಗಿಡಗಳನ್ನು 4 ಸಾವಿರ ಚದರ ಅಡಿ ಪ್ರದೇಶದಲ್ಲಿ ನೆಡಲಾಗುವುದು’ ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ, ‘ರೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸಲು ಉದ್ಯಾನಗಳು ಸಹಕಾರಿ’ ಎಂದು ಹೇಳಿದರು.

Post Comments (+)