ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೋ ಇಂಡಿಯಾ; ಅಭಯ್‌ ಅಶ್ವಿನ್‌ ‘ಗ್ರಿಪೆನ್‌ ವಾರಿಯರ್‌’

ಕಾಕ್‌ಪಿಟ್‌ ಸಿಮ್ಯುಲೇಟರ್‌ನಲ್ಲಿ ಸ್ಪರ್ಧೆ
Last Updated 26 ಫೆಬ್ರುವರಿ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ಏರೋ ಇಂಡಿಯಾ ಪ್ರದರ್ಶನದಲ್ಲಿ ಸ್ವೀಡನ್‌ನ ಗ್ರಿಪೆನ್‌ ಏರ್‌ಕ್ರಾಫ್ಟ್‌ನ ಕಾಕ್‌ಪಿಟ್‌ ಸಿಮ್ಯುಲೇಟರ್‌ನಲ್ಲಿ ನಡೆಸಲಾದ ಸ್ಪರ್ಧೆಯಲ್ಲಿ ನಗರದ ವಿದ್ಯಾರ್ಥಿ ಪೈಲಟ್‌ ಅಭಯ್‌ ಅಶ್ವಿನ್‌ ‘ಗ್ರಿಪೆನ್‌ ವಾರಿಯರ್‌’ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು ಸ್ವೀಡನ್‌ನ ಗ್ರಿಪೆನ್‌ ಯುದ್ಧ ವಿಮಾನಗಳ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶ ಪಡೆದಿದ್ದಾರೆ.

ಆನ್‌ಲೈನ್‌ ಸ್ಪರ್ಧೆಯಲ್ಲೂ ಅಭಯ್‌ ವಿಜೇತರಾಗಿದ್ದರು. ಈ ಸ್ಪರ್ಧೆಯಲ್ಲಿ 27 ರಾಜ್ಯಗಳಿಂದ 2 ಸಾವಿರ ಮಂದಿ ಭಾಗ
ವಹಿಸಿದ್ದರು. ಸ್ಪರ್ಧೆಯ ಅಂತಿಮ ತೀರ್ಪುಗಾರರಾಗಿ ಸಾಬ್‌ ಸಂಸ್ಥೆಯ ಮುಖ್ಯ ಪರೀಕ್ಷಾ ಪೈಲಟ್‌ಗಳಾದ ಹಾನ್ಸ್‌ ಐನೆರ್ಥ್‌ ಮತ್ತು ಮಾರ್ಟಿನ್‌ ಹ್ಯಾಂಬ್ರಿಯೂಸ್‌ ಇದ್ದರು. ಏರ್‌ ಕಾಂಬ್ಯಾಟ್‌ ಇಮ್ಯುಲೇಟರ್‌ ಮಟ್ಟದ ಸವಾಲನ್ನು ಎದುರಿಸಿ ವಿಜೇತರಾಗಿರುವ ಅವರು, ನಗರದ ಹಾರಾಟ ತರಬೇತಿ ಶಾಲೆಯ ವಿದ್ಯಾರ್ಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT