ಎಆರ್‌ಐಐಎ ರ್‍ಯಾಂಕಿಂಗ್: ವಿಐಟಿಗೆ ಮೊದಲ ಸ್ಥಾನ

ಶುಕ್ರವಾರ, ಏಪ್ರಿಲ್ 26, 2019
35 °C

ಎಆರ್‌ಐಐಎ ರ್‍ಯಾಂಕಿಂಗ್: ವಿಐಟಿಗೆ ಮೊದಲ ಸ್ಥಾನ

Published:
Updated:

ವೆಲ್ಲೂರು: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ದೇಶದ ಖಾಸಗಿ ಸಂಸ್ಥೆಗಳಿಗೆ ನೀಡುವ ರ್‍ಯಾಂಕಿಂಗ್ ಪಟ್ಟಿಯಲ್ಲಿ ವೆಲ್ಲೂರ್‌ ತಂತ್ರಜ್ಞಾನ ಸಂಸ್ಥೆ (ವಿಐಟಿ) ಮೊದಲ ಸ್ಥಾನ ಪಡೆದಿದೆ. 

ಆವಿಷ್ಕಾರಿ ಸಾಧನೆಗೈದ ಸಂಸ್ಥೆಗಳಿಗೆ ನೀಡುವ ಅಟಲ್ ರ್‍ಯಾಂಕಿಂಗ್ (ಎಆರ್‌ಐಐಎ) ಪ್ರಶಸ್ತಿಯನ್ನು ಸರ್ಕಾರಿ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳು ವಿಭಾಗದಲ್ಲಿ ಪ್ರತ್ಯೇಕವಾಗಿ ನೀಡಲಾಗುತ್ತದೆ. 2019ನೇ
ಸಾಲಿನ ಈ ಪಟ್ಟಿಯಲ್ಲಿ ಖಾಸಗಿ ಸಂಸ್ಥೆಗಳ ವಿಭಾಗದಲ್ಲಿ ವಿಐಟಿ ನಂ.1 ಸ್ಥಾನ ಗಳಿಸಿದೆ. ಈ ಬಾರಿ 10 ಸರ್ಕಾರಿ ಸಂಸ್ಥೆಗಳು ಹಾಗೂ ಐದು ಖಾಸಗಿ ಸಂಸ್ಥೆಗಳು ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಸ್ಥಾನ ಗಳಿಸಿವೆ. 

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಎಆರ್‌ಐಐಎ ಪ್ರಶಸ್ತಿ ಪ್ರದಾನ ಮಾಡಿದರು.

ವಿಐಟಿ ಕುಲಪತಿ ಡಾ.ಜಿ. ವಿಶ್ವನಾಥನ್ ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !