ಶನಿವಾರ, ಆಗಸ್ಟ್ 24, 2019
28 °C

ನಗರದ ರೂಪದರ್ಶಿಗಳಿಗೆ ಪ್ರಶಸ್ತಿ

Published:
Updated:

ಬೆಂಗಳೂರು: ತಿಬ್ಬಾಸ್ ಗ್ರೂಪ್ ಸಂಸ್ಥೆ ಇತ್ತೀಚೆಗೆ ಮೈಸೂರಿನಲ್ಲಿ ಆಯೋಜಿಸಿದ್ದ ‘ನ್ಯಾಷನಲ್ ಐಕಾನ್ ಮಾಡೆಲ್ ಹಂಟ್ 2019’ ರೂಪದರ್ಶಿ ಸ್ಪರ್ಧೆಯಲ್ಲಿ ಬೆಂಗ ಳೂರಿನ ಆರು ಮಂದಿ ಪ್ರಶಸ್ತಿ ಪಡೆದಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶುಭಿತ್‌ ಎನ್‌.ವಿ., ‘ಈ ರಾಷ್ಟ್ರಮಟ್ಟದ ರೂಪದರ್ಶಿಗಳ  ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ 114 ಮಂದಿ ಭಾಗವಹಿಸಿದ್ದರು. ಲಿಟಲ್ ಪ್ರಿನ್ಸ್ ಮತ್ತು ಪ್ರಿನ್ಸೆಸ್, ಟೀನ್ ಮಿಸ್ಟರ್ ಹಾಗೂ ಮಿಸ್ ವಿಭಾಗಗಳಲ್ಲಿ ತಲಾ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದರು.

ವಿಜೇತರ ವಿವರ: ಎನ್. ನಯನ್ ಅನ್ಷ್ (11 ವರ್ಷ)– ನ್ಯಾಷನಲ್ ಐಕಾನ್‌ ವಿಜೇತ, ಸಲ್ಮಾನ್ (16)– ಟೀನ್‌
ವಿಭಾಗದ ವಿಜೇತ, ಚೇತನ್(26)–ಮಿಸ್ಟರ್ ವಿಭಾಗದ ವಿಜೇತ, ಎಸ್.ವಿಜಯ್ (19)– ದಕ್ಷಿಣ ಭಾರತ ವಿಭಾಗದ ರನ್ನರ್‌ಅಪ್‌,

ಸೃಷ್ಟಿ (5)– ಲಿಟಲ್ ಪ್ರಿನ್ಸ್ ಆ್ಯಂಡ್‌ ಪ್ರಿನ್ಸೆಸ್ ‘ನಾರ್ತ್ ಕರ್ನಾಟಕ’ ವಿಭಾಗದ ವಿಜೇತೆ, ಟಿಷಾ ಪುನೀತ್ (5)– ಸೌತ್ ಕರ್ನಾಟಕ ವಿಭಾಗದ ರನ್ನರ್ ಅಪ್.

 

Post Comments (+)