ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಪ್ರೌಢಶಾಲೆಯ ಕ್ಯಾಮೆರಾ ಕಳವು

Last Updated 17 ಜನವರಿ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ನಗರದ ನಂಜಪ್ಪ ಬ್ಲಾಕ್‌ನಲ್ಲಿರುವ ಬಿಬಿಎಂಪಿ ಪ್ರೌಢಶಾಲೆಯಲ್ಲಿ ಕಳ್ಳತನ ಎಸಗಿರುವ ದುಷ್ಕರ್ಮಿಗಳು, ಮುಖ್ಯ ಶಿಕ್ಷಕರ ಕೊಠಡಿ ಬಳಿ ಅಳವಡಿಸಿದ್ದಸಿ.ಸಿ.ಟಿ.ವಿ ಕ್ಯಾಮೆರಾವನ್ನೇ ಕದ್ದೊಯ್ದಿದ್ದಾರೆ.

ಆ ಸಂಬಂಧ ಶಾಲಾ ಶಿಕ್ಷಕಿ ಕೋಮಲಾದೇವಿ, ಕೆಂಪೇಗೌಡ ನಗರ ಠಾಣೆಗೆ ದೂರು ನೀಡಿದ್ದಾರೆ.

‘ಜ. 14ರ ಸಂಜೆ 5 ಗಂಟೆಗೆ ಶಾಲೆಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದೆವು. ಜ. 16ರಂದು ಬೆಳಿಗ್ಗೆ 9.45 ಗಂಟೆಗೆ ಶಾಲೆಗೆ ಎಂದಿನಂತೆ ವಾಪಸ್ ಬಂದಾಗ ಕಳ್ಳತನದ ವಿಷಯ ಗೊತ್ತಾಗಿದೆ. ಶಾಲಾ ರಜೆ ಅವಧಿಯಲ್ಲೇ ಯಾರೋ ದುಷ್ಕರ್ಮಿಗಳು ಕಳ್ಳತನ ಎಸಗಿದ್ದಾರೆ’ ಎಂದು ಕೋಮಲಾದೇವಿ ದೂರಿನಲ್ಲಿ ತಿಳಿಸಿದ್ದಾರೆ.

‘ಶಾಲೆಯ ನೆಲಮಹಡಿಯಲ್ಲಿರುವ ಗ್ರೀಲ್ ಗೇಟ್‌ನ ಕಿಂಡಿಯ ಮೂಲಕ ಒಳಗೆ ನುಗ್ಗಿದ್ದ ಕಳ್ಳರು, ಎರಡನೇ ಮಹಡಿಯಲ್ಲಿರುವ ಆಟದ ಕೊಠಡಿಯ ಬಾಗಿಲಿನ ಬೀಗ ಮುರಿದಿದ್ದಾರೆ. ಆ ಕೊಠಡಿಯಲ್ಲಿದ್ದ ವಾಲಿಬಾಲ್, ಥ್ರೋಬಾಲ್ ಹಾಗೂ ಕ್ರೀಡಾ ಸಮವಸ್ತ್ರಗಳನ್ನು ಕದ್ದುಕೊಂಡು ಹೋಗಿದ್ದಾರೆ’.

‘ಹೋಗುವಾಗ, ಮುಖ್ಯ ಶಿಕ್ಷಕರ ಕೊಠಡಿ ಎದುರು ಹಾಕಲಾಗಿದ್ದ ಸಿ.ಸಿ.ಟಿ.ವಿ ಕ್ಯಾಮೆರಾವನ್ನು ಸಹ ಕದ್ದೊಯ್ದಿದ್ದಾರೆ. ಕಳುವಾದ ವಸ್ತುಗಳ ಬೆಲೆ ಸುಮಾರು ₹20 ಸಾವಿರ ಆಗಿದೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

‘ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT