ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23ರಿಂದ ‘ಬೆಂಗಳೂರು ಬೈ ಡಿಸೈನ್‌’ ವಿನ್ಯಾಸ ಉತ್ಸವ

Last Updated 13 ನವೆಂಬರ್ 2018, 18:48 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮೊದಲ ಬಾರಿಗೆ ವಿನ್ಯಾಸ ಉತ್ಸವ ‘ಬೆಂಗಳೂರು ಬೈ ಡಿಸೈನ್‌’ ನ. 23ರಿಂದ ಡಿ. 2ರವರೆಗೆ ನಡೆಯಲಿದೆ.

ವಿನ್ಯಾಸ ಕ್ಷೇತ್ರದಲ್ಲಿ ಹೊಸತನ, ಮಾದರಿ ಪ್ರಾತ್ಯಕ್ಷಿಕೆ, ವಸ್ತುಪ್ರದರ್ಶನ, ಕಾರ್ಯಾಗಾರ, ವಿಚಾರ ಸಂಕಿರಣಗಳು 10 ದಿನಗಳ ಕಾಲ ನಡೆಯಲಿವೆ. ಈ ಕ್ಷೇತ್ರದ ಸೃಜನಶೀಲತೆ, ಆಲೋಚನೆಗಳನ್ನು ವ್ಯಕ್ತಪಡಿಸಲು, ವಿನ್ಯಾಸ ಕ್ಷೇತ್ರದ ಹೊಸ ಪ್ರತಿಭೆಗಳಿಗೆ ಬೆಳಕು ಚೆಲ್ಲುವ ಕುರಿತು ಈ ಉತ್ಸವ ವೇದಿಕೆ ಕಲ್ಪಿಸುವ ಗುರಿ ಹೊಂದಿದೆ.

ವಿಶ್ವದ ಮೂಲೆ ಮೂಲೆಗಳಿಂದ ವೃತ್ತಿಪರ ವಿನ್ಯಾಸಕಾರರು ಪಾಲ್ಗೊಳ್ಳಲಿದ್ದಾರೆ. ವಿವಿಧ ಕಂಪನಿಗಳು ಈ ಉತ್ಸವಕ್ಕೆ ಸಹಯೋಗ ನೀಡಿವೆ.
ಉತ್ಸವದ ಮುಖ್ಯ ಥೀಮ್‌ಗಳು: ವಿನ್ಯಾಸ ಮತ್ತು ಸಾರ್ವಜನಿಕರು, ವಿನ್ಯಾಸ ಮತ್ತು ಶಿಕ್ಷಣ, ವಿನ್ಯಾಸ ಮತ್ತು ಉದ್ಯಮ, ಜನರ ಸಹಭಾಗಿತ್ವ, ಶಿಕ್ಷಣ, ಆವಿಷ್ಕಾರ, ಸುಸ್ಥಿರತೆ, ವಿನ್ಯಾಸದ ಮೂಲಕ ಸೃಜನಶೀಲತೆಯನ್ನು ಈ ಕಾರ್ಯಕ್ರಮ ಉತ್ತೇಜಿಸಲಿದೆ. ಸೃಜನಶೀಲ ಆಲೋಚನೆ ಹಾಗೂ ವಿನ್ಯಾಸ ಕ್ಷೇತ್ರದಲ್ಲಿ ನಾಯಕತ್ವವನ್ನು ಉತ್ತೇಜಿಸುವ ಗುರಿಯನ್ನೂ ಹೊಂದಿದೆ ಎಂದು ಸಂಘಟಕರ ಪ್ರ‌ಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT