ವಿಚ್ಛೇದನ ಕೋರಿದ್ದ ದಂಪತಿಯನ್ನು ಒಂದು ಮಾಡಿದ ಸಿಜೆಐ

7

ವಿಚ್ಛೇದನ ಕೋರಿದ್ದ ದಂಪತಿಯನ್ನು ಒಂದು ಮಾಡಿದ ಸಿಜೆಐ

Published:
Updated:

ಹುಬ್ಬಳ್ಳಿ:  ಇಲ್ಲಿನ ನ್ಯಾಯಾಲಯಗಳ ಸಂಕೀರ್ಣಗಳ ಉದ್ಘಾಟನೆ ಆಗಮಿಸಿದ್ದ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ದೀಪಕ್ ಮಿಶ್ರಾ, ಲೋಕ್ ಅದಾಲತ್‌ನಲ್ಲಿ ಕೌಟುಂಬಿಕ ವ್ಯಾಜ್ಯವೊಂದನ್ನು ಬಗೆಹರಿಸಿ, ದಂಪತಿಯನ್ನು ಒಂದು ಮಾಡಿದರು.

ಹುಬ್ಬಳ್ಳಿಯ ಕೇಶ್ವಾಪುರದ ನಿವಾಸಿ ಜಗದೀಶ ಶೆಳಗಿ ಹಾಗೂ ಪಾರ್ವತಿ ವಿಚ್ಛೇದನ ಕೋರಿದ್ದರು. ಈ ಪ್ರಕರಣದ ವಿಚಾರಣೆಯನ್ನು ಖುದ್ದು ನಡೆಸಿದ ಮಿಶ್ರಾ, ಕೌಟುಂಬಿಕ ಮೌಲ್ಯವನ್ನು ತಿಳಿಸಿ ದಂಪತಿ ಮನವೊಲಿಸುವಲ್ಲಿ ಯಶಸ್ವಿಯಾದರು. ಜಗದೀಶ ಅವರ ಮಕ್ಕಳಾದ ರೋಹಿತ್, ನಂದಿನಿ, ರಕ್ಷಿತಾ ಸಹ ಇದ್ದರು.

‘ಈಗ ನೀವಿಬ್ಬರೂ ಹಟ ಹಿಡಿದು ವಿಚ್ಛೇದನ ಪಡೆದರೆ, ನಾಳೆ ನಿಮ್ಮ ಮಕ್ಕಳಿಗೆ ಕೌಟುಂಬಿಕ ಜೀವನದ ಆದರ್ಶ ಹೇಳಲು ಸಾಧ್ಯವಾಗುವುದಿಲ್ಲ. ನಿಮ್ಮ ಜಗಳ ನೋಡಿ ಬೆಳದ ಮಕ್ಕಳು, ಭವಿಷ್ಯದಲ್ಲಿ ಕುಟುಂಬ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡು ಮದುವೆಯಾಗಲು ಹಿಂದೇಟು ಹಾಕುತ್ತಾರೆ. ಕುಟುಂಬ ವ್ಯವಸ್ಥೆ ಹಾಳಾದರೆ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ಜೀವಿಸಿ ಸುಖ ಸಂತಸದಿಂದ ಇರಿ’ ಸಿಜೆಐ ಸಲಹೆ ನೀಡಿದರು.

ಒಟ್ಟು 9 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ವಿಶೇಷ ಲೋಕ ಅದಾಲತ್‌ನಲ್ಲಿ ಬಗೆಹರಿಸಲಾಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !