ಶೇಂಗಾ ರೈತರಿಂದ ಮಾಹಿತಿ ಪಡೆದ ಆಂಧ್ರಪ್ರದೇಶ ಸಿ.ಎಂ ನಾಯ್ಡು

7
ಬಿಟಿ‍ಪಿ ಡ್ಯಾಂಗೆ ಜನವರಿ ಅಂತ್ಯಕ್ಕೆ ಕೃಷ್ಣಾ ನೀರು

ಶೇಂಗಾ ರೈತರಿಂದ ಮಾಹಿತಿ ಪಡೆದ ಆಂಧ್ರಪ್ರದೇಶ ಸಿ.ಎಂ ನಾಯ್ಡು

Published:
Updated:
Deccan Herald

ಮೊಳಕಾಲ್ಮುರು: ‘ಗಡಿಭಾಗದ ಆಂಧ್ರಪ್ರದೇಶದ ರಾಯದುರ್ಗ ತಾಲ್ಲೂಕಿನ ಬೋರನತಿಪ್ಪೆ ಡ್ಯಾಂ(ಬಿಟಿಪಿ)ಗೆ ಮುಂದಿನ ಜನವರಿ ಅಂತ್ಯಕ್ಕೆ ಕೃಷ್ಣಾ ನದಿಯಿಂದ ನೀರು ತುಂಬಿಸಲಾಗುವುದು’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭರವಸೆ ನೀಡಿದರು.

ಬುಧವಾರ ಡ್ಯಾಂ ಬಳಿ ನೀರು ಹಾಯಿಸುವ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಅಂದಾಜು ₹925 ಕೋಟಿ ವೆಚ್ಚದಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದ ರಾಯಲಸೀಮೆಯ ಕಟ್ಟಕಡೆ ಪ್ರದೇಶವಾದ ರಾಯದುರ್ಗ ತಾಲ್ಲೂಕಿಗೂ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ ಎಂದರು.

300 ಕಿ.ಮೀ. ದೂರದ ಶ್ರೀಶೈಲ ಬಳಿಯಿಂದ ಕೃಷ್ಣಾ ನೀರನ್ನು ಅನಂತಪುರ ಜಿಲ್ಲೆ ಜೀರಪಲ್ಲಿ ಬಳಿ ಸಂಗ್ರಹಿಸಿ ಅಲ್ಲಿಂದ ಏತ ನೀರಾವರಿ ಪದ್ಧತಿ ಮೂಲಕ ಬಿಟಿಪಿಗೆ ಹರಿಸಲಾಗುವುದು ಎಂದರು.

ರಾಯದುರ್ಗ ತಾಲ್ಲೂಕಿಗೆ 3 ಟಿಎಂಸಿ ನೀರು ಹಂಚಿಕೆಯಾಗಿದೆ. ಇದರಲ್ಲಿ ಬಿಟಿಪಿಗೆ 2 ಟಿಎಂಸಿ ನೀಡಲಾಗುವುದು. ಬಿಟಿಪಿಯಿಂದ ಸಮೀಪದ ಕೆರೆಗಳಿಗೂ ನೀರು ತುಂಬಿಸಲಾಗುವುದು. ಜನವರಿ ಅಂತ್ಯಕ್ಕೆ ಶತಾಯುಗತಾಯ ನೀರು ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದರು.

ಸಮೀಪದ ಹೊಲಕ್ಕೆ ಭೇಟಿ ನೀಡಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿ ಮಳೆ ಕೊರತೆಯಿಂದಾಗಿ ಹಾನಿಗೀಡಾಗಿರುವ ಶೇಂಗಾ ಬಗ್ಗೆ ರೈತರಿಂದ ಮಾಹಿತಿ ಪಡೆದರು. ಈ ಬಗ್ಗೆ ಪೂರ್ಣ ವಿವರ ಪಡೆದು ನೆರವು ಕಲ್ಪಿಸುವುದಾಗಿ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !