ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮತ್ತೆ 10 ಕೊರೊನಾ ಪಾಸಿಟಿವ್ ದೃಢ: 191ಕ್ಕೇರಿತು ಸೋಂಕಿತರ ಸಂಖ್ಯೆ

Last Updated 9 ಏಪ್ರಿಲ್ 2020, 7:41 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 191ಕ್ಕೆ ಏರಿಕೆಯಾಗಿದೆ. ನಿನ್ನೆ (ಏ.8) ಸಂಜೆ 5ರಿಂದ ಇಂದು (ಏ.9) ಮಧ್ಯಾಹ್ನ 12ರ ಅವಧಿಯಲ್ಲಿ ಒಟ್ಟು 10 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಒಟ್ಟು 28 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 6 ಮಂದಿ ಮೃತಪಟ್ಟಿದ್ದಾರೆ.

ಮೈಸೂರಿನಲ್ಲಿ ಇನ್ನೂ ಎರಡು ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 37ಕ್ಕೇರಿದೆ. ಇದೀಗ ಕೋವಿಡ್ ಪೀಡಿತರಾದ ಇಬ್ಬರು ಈಗಾಗಲೇ ರೋಗ ಪೀಡಿತರಾಗಿರುವವರ ಸಂಬಂಧಿ. ಇಬ್ಬರನ್ನೂ ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣ 182- ಬೆಳಗಾವಿಯ 50 ವರ್ಷದ ಪುರುಷ. 128ನೇ ಸೋಂಕಿತನ ತಂದೆ. ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ 183- ಮೈಸೂರಿನ 55 ವರ್ಷದ ಪುರುಷ. 159ನೇ ಸೋಂಕಿತನ ತಂದೆ. 104ನೇ ಸೋಂಕಿತನ ಸಂಬಂಧಿ. ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ 184- ಮೈಸೂರಿನ 68 ವರ್ಷದ ಪುರುಷ. 159ನೇ ಸೋಂಕಿತನ ತಂದೆ. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ 185- ಮಂಡ್ಯದ 32 ವರ್ಷದ ಪುರುಷ. ಪ್ರಕರಣ 78ರ ಸೋಂಕಿತನ ಸಹೋದ್ಯೋಗಿ. ಇಬ್ಬರೂ ಜೊತೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ 186- ಬಾಗಲಕೋಟೆಯ ನಾಲ್ಕು ವರ್ಷದ ಗಂಡು ಮಗು. ಪ್ರಕರಣ 165ರ ಸೋಂಕಿತರ ಮಗ. ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ 187- ಬಾಗಲಕೋಟೆಯ 13 ವರ್ಷದ ಬಾಲಕ. ಪ್ರಕರಣ 165ರ ಸಂಬಂಧಿ. ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ 188- ಬಾಗಲಕೋಟೆಯ 9 ವರ್ಷದ ಬಾಲಕಿ. ಪ್ರಕರಣ 165ರ ಸಂಬಂಧಿ. ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ 189- ಬೆಂಗಳೂರಿನ 19 ವರ್ಷದ ಯುವತಿ. ದೆಹಲಿಗೆ ಹೋಗಿದ್ದ ವಿವರ ಪತ್ತೆಯಾಗಿದೆ. ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ 190- ಬೆಂಗಳೂರಿನ 27 ವರ್ಷದ ಪುರುಷ. ದೆಹಲಿಯಿಂದ ಹಿಂದಿರುಗಿದ್ದರು. ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ 191- ಚಿಕ್ಕಬಳ್ಳಾಪುರದ 48 ವರ್ಷದ ಮಹಿಳೆ. ಪ್ರಕರಣ 19 ಮತ್ತು 94ರ ಸೋಂಕಿತರ ಸೋದರಿ. ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT