ಸೋಮವಾರ, ಸೆಪ್ಟೆಂಬರ್ 16, 2019
21 °C

ಲೈಂಗಿಕ ಕ್ರಿಯೆ ವಿಡಿಯೊ ವೈರಲ್‌: ಯುವಕನ ಬಂಧನ

Published:
Updated:

ಖಾನಾಪುರ: ಯುವತಿಯೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದ ಯುವಕನನ್ನು ಬಂಧಿಸಲಾಗಿದೆ. 

ಯುವತಿಯ ಮದುವೆ ಇನ್ನೊಬ್ಬರೊಂದಿಗೆ ಆದ ನಂತರವೂ ಲೈಂಗಿಕ ಕ್ರಿಯೆಯ ಬೇಡಿಕೆ ಇರಿಸಿದ್ದ. ಅದನ್ನು ಯುವತಿ ಒಪ್ಪದಿದ್ದಾಗ, ಬೆದರಿಸಲು ಹಳೆಯ ಲೈಂಗಿಕ ಕ್ರಿಯೆಯ ಚಿತ್ರೀಕರಣವಿರುವ ಕ್ಲಿಪ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. 

ಖಾನಾಪುರ ಪೊಲೀಸ್‌ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಳು.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ರಾಮನಗರ ಗ್ರಾಮದ ಅಜಿತ್‌ ಅಲಿಯಾಸ್‌ ಅಜಯ್‌ ದೇಸಾಯಿ ಎಂಬಾತನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆರೋಪಿಯನ್ನು ಪಟ್ಟಣದ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಹಿಂಡಲಗಾ ಕಾರಾಗೃಹಕ್ಕೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಖಾನಾಪುರ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

Post Comments (+)