ಬುಧವಾರ, ಅಕ್ಟೋಬರ್ 16, 2019
22 °C

ದಸರಾ | ದಾಬಸ್ ಪೇಟೆ: ವ್ಯಾಪಾರ ಅಷ್ಟಕಷ್ಟೆ

Published:
Updated:
Prajavani

ದಾಬಸ್ ಪೇಟೆ: ದಸರಾ ಅಂಗವಾಗಿ ಇಲ್ಲಿನ ಉದ್ದಾನೇಶ್ವರ ವೃತ್ತ, ದೊಡ್ಡಬಳ್ಳಾಪುರ, ಕೊರಟಗೆರೆ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಬೂದುಗುಂಬಳ, ನಿಂಬೆಹಣ್ಣು, ಬಾಳೆಕಂದು, ತೆಂಗಿನಕಾಯಿ ಹಾಗೂ ಹೂ-ಹಣ್ಣುಗಳ ವ್ಯಾಪಾರ ನಡೆಯಿತು.

ವಿವಿಧ ಎತ್ತರದ ಬಾಳೆಕಂದುಗಳಿಗೆ ಅದರದೇ ದರ ನಿಗದಿಯಾಗಿದ್ದರೆ, ಬೂದುಗುಂಬಳ ಕೆ.ಜಿಗೆ ₹20ರಂತೆ ಮಾರಲಾಗುತ್ತಿತ್ತು. ಹೂವುಗಳ ದರ ಹೆಚ್ಚಾಗಿತ್ತು. ತರಕಾರಿಯ ಬೆಲೆಯಲ್ಲಿ ಸ್ಥಿರತೆ ಕಂಡು ಬಂತು. ಮೂರು ದಿನಗಳಿಂದ ಮಧ್ಯಾಹ್ನವೇ ಮಳೆ ಬರುತ್ತಿರುವುದು ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಕಾರ್ಖಾನೆಗಳು, ಅಂಗಡಿಗಳು ಹೆಚ್ಚಿವೆ ಒಳ್ಳೆ ವ್ಯಾಪಾರದ ನಿರೀಕ್ಷೆ ಇತ್ತು. ಸಾಕಷ್ಟು ಕಾರ್ಖಾನೆಗಳು ಪೂಜೆ ಮುಗಿಸಿರುವುದರಿಂದ ವ್ಯಾಪಾರ ಅಷ್ಟಕಷ್ಟೆ ಎಂದು ವರ್ತಕರೊಬ್ಬರು ಹೇಳಿದರು. 

 

Post Comments (+)