ಉಪನಗರ ರೈಲು: ಹೊಸ ಷರತ್ತುಗಳು ಏಕೆ?

7
ರಾಜ್ಯ ಸರ್ಕಾರದ ಧೋರಣೆಯಿಂದ ಯೋಜನೆ ವಿಳಂಬ: ಸಂಸದರ ಆಕ್ರೋಶ

ಉಪನಗರ ರೈಲು: ಹೊಸ ಷರತ್ತುಗಳು ಏಕೆ?

Published:
Updated:
Prajavani

ಬೆಂಗಳೂರು: ‘ಬೆಂಗಳೂರು ಉಪನಗರ ರೈಲು ಯೋಜನೆಯ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಸಚಿವ ಸಂಪುಟ‌ ಒಪ್ಪಿಗೆ ನೀಡಿದ ಬಳಿಕವೂ ಸರ್ಕಾರ ಹೊಸ ಷರತ್ತುಗಳನ್ನು ವಿಧಿಸಿದೆ. ಇದರಿಂದ ಇಡೀ ಯೋಜನೆ ಹಳಿ ತಪ್ಪುವ ಸಾಧ್ಯತೆಯಿದೆ’ ಎಂದು ಸಂಸದ ಪಿ.ಸಿ.ಮೋಹನ್ ಹೇಳಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಅವರು ಪತ್ರ ಬರೆದಿದ್ದಾರೆ. ಯೋಜನೆ ಅನುಷ್ಠಾನ ಹಂತ ತಲುಪಿದಾಗ ಹೀಗೆ ಒಪ್ಪಲಾಗದಂತಹ ಷರತ್ತುಗಳನ್ನು ವಿಧಿಸಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ನಿಲ್ದಾಣಗಳ ನಡುವೆ 4-5 ಕಿ.ಮೀ. ದೂರವಿರಬೇಕು ಎನ್ನುವುದೂ ಸೇರಿದಂತೆ ವಿಧಿಸಿರುವ 19 ಷರತ್ತುಗಳು ಎಷ್ಟು ಅವಶ್ಯಕ ಎನ್ನುವುದನ್ನು ಸರ್ಕಾರ ಜನರಿಗೆ ವಿವರಿಸಬೇಕು ಎಂದು ಒತ್ತಾಯಿಸಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಮೊದಲು ಶೇ 60ರಷ್ಟು ಬ್ಯಾಂಕ್‌ ಸಾಲ ಪಡೆದರೆ, ಉಳಿದ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಶೇ 20ರಷ್ಟು ಭರಿಸಲು ಉದ್ದೇಶಿಸಲಾಗಿತ್ತು. ಆದರೆ, ಶೇ 49ರಷ್ಟು ವೆಚ್ಚ ಭರಿಸಬೇಕು ಎನ್ನುವ ರಾಜ್ಯದ ಬೇಡಿಕೆಗೆ ಕೇಂದ್ರ ಒಪ್ಪಿಕೊಂಡಿತ್ತು. ಇಷ್ಟಾಗಿಯೂ ರಾಜ್ಯ ಸರ್ಕಾರ ಉದಾಸೀನ ತೋರುತ್ತಿದೆ.ಹಟಮಾರಿ
ಧೋರಣೆ ಬಿಟ್ಟು, ಯೋಜನೆ ಜಾರಿಗೆ ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !