ಡಿಜಿಟಲ್‌ ಪಾವತಿ ಉತ್ತೇಜನಕ್ಕೆ ಎಚ್‌.ಪಿ ರಿಫಿಲ್‌ ಆ್ಯಪ್‌

7

ಡಿಜಿಟಲ್‌ ಪಾವತಿ ಉತ್ತೇಜನಕ್ಕೆ ಎಚ್‌.ಪಿ ರಿಫಿಲ್‌ ಆ್ಯಪ್‌

Published:
Updated:

ಬೆಂಗಳೂರು: ಪೆಟ್ರೋಲಿಯಂ ಹಾಗೂ ಇತರ ಉತ್ಪನ್ನಗಳ ಖರೀದಿಯಲ್ಲಿ ಡಿಜಿಟಲ್ ಪಾವತಿ ಉತ್ತೇಜಿಸಲು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿ (ಎಚ್‌ಪಿಸಿ) ಪ್ರಚಾರ ವಾಹನದ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದೆ. 

ಎಚ್‌ಪಿಸಿ ದಕ್ಷಿಣ ವಲಯದ ಪ್ರಧಾನ ವ್ಯವಸ್ಥಾಪಕ ಅಂಬಾ ಭವಾನಿ ಈ ಮಾಹಿತಿ ನೀಡಿದರು. ‘ಎಚ್‌.ಪಿ ರಿಫಿಲ್‌ ಎನ್ನುವ ಆ್ಯಪ್‌ ಬಿಡುಗಡೆಗೊಳಿಸಿದೆ. ಅದರಲ್ಲಿ ಮೊದಲ ಸಾರಿ ಡಿಜಿಟಲ್‌ ಪಾವತಿ ಮಾಡಿದರೆ ₹85 ಮೌಲ್ಯದ ಲಾಯಲ್ಟಿ ಪಾಯಿಂಟ್‌ ಸಿಗುತ್ತದೆ. ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ಅದನ್ನು ಬಳಸಿ ಪೆಟ್ರೋಲ್‌ ಹಾಕಿಸಿಕೊಳ್ಳಬಹುದು’ ಎಂದು ತಿಳಿಸಿದರು.

‘ಡಿಜಿಟಲ್‌ ಪಾವತಿ ಹೆಚ್ಚಾದರೆ ನಮಗೂ ಅನುಕೂಲವಾಗಲಿದ್ದು, ಬ್ಯಾಂಕ್‌ಗೆ ಹೋಗಿ ಹಣ ಕಟ್ಟುವುದು ತಪ್ಪುತ್ತದೆ. ಅದಕ್ಕಾಗಿ ಬೆಂಗಳೂರಿನಲ್ಲಿ ಪ್ರಚಾರ ವಾಹನದ ಮೂಲಕ ಡಿಜಿಟಲ್‌ ಪಾವತಿಯ ಕುರಿತು ಅರಿವು ಮೂಡಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !