‘ತುಟ್ಟಿ ಭತ್ಯೆ ಮಂಜೂರಾತಿಗೆ ಸಿ.ಎಂ ಭರವಸೆ’

7

‘ತುಟ್ಟಿ ಭತ್ಯೆ ಮಂಜೂರಾತಿಗೆ ಸಿ.ಎಂ ಭರವಸೆ’

Published:
Updated:

ಬೆಂಗಳೂರು: ‘ಸರ್ಕಾರಿ ನೌಕರರಿಗೆ ಇದೇ ಜುಲೈ 1ರಿಂದ ಬಾಕಿ ಇರುವ ಶೇ 2 ತುಟ್ಟಿ ಭತ್ಯೆಯನ್ನು ಶೀಘ್ರದಲ್ಲೇ ಮಂಜೂರು ಮಾಡಿ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ' ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್‌.ಕೆ. ರಾಮು ತಿಳಿಸಿದ್ದಾರೆ.

ಸಂಘದ ಪದಾಧಿಕಾರಿಗಳ ಜೊತೆ ಅವರು ಗುರುವಾರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಬೇಡಿಕೆಗಳ ಮನವಿ ಸಲ್ಲಿಸಿದರು.

‘ಆರನೇ ವೇತನ ಆಯೋಗ ಸಲ್ಲಿಸಿದ ಮೊದಲ ವರದಿಯಲ್ಲಿರುವ ಶಿಫಾರಸುಗಳ ಅನುಷ್ಠಾನ ಮತ್ತು ಅಂತಿಮ ವರದಿಯ ಶಿಫಾರಸುಗಳ ಅನುಷ್ಠಾನಕ್ಕೂ ಮೊದಲು ಉನ್ನತ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. ಸಂಘದ ಶತಮಾನೋತ್ಸವ ಕಟ್ಟಡಕ್ಕೆ ನಿವೇಶನ ಮಂಜೂರು ಮಾಡುವ ಕುರಿತಂತೆ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವ ಮಾತು ಕೊಟ್ಟಿದ್ದಾರೆ’ ಎಂದೂ ರಾಮು ಹೇಳಿದ್ದಾರೆ.

‘ಹಳೆ ಪಿಂಚಣಿ ಯೋಜನೆ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿ ರಚಿಸಲಾಗುವುದು. ಅಲ್ಲದೆ, ಸುಪ್ರೀಂ ಕೋರ್ಟ್‌ನ ಅಂತಿಮ ಷರತ್ತಿಗೆ ಬದ್ಧವಾಗಿ ನಿಯಮ 32 ಅಡಿ ಬಡ್ತಿ ನೀಡಲು ನಿರ್ದೇಶನ ನೀಡುವುದಾಗಿ ಮುಖ್ಯಮಂತ್ರಿ ಆಶ್ವಾಸನೆ ನೀಡಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !