ಸೋಮವಾರ, ಸೆಪ್ಟೆಂಬರ್ 16, 2019
29 °C

ದೌರ್ಜನ್ಯ ತಡೆಗೆ ಸಮಿತಿ ರಚಿಸಿ: ಶಿಕ್ಷಕಿಯರ ಒತ್ತಾಯ

Published:
Updated:

ಬೆಂಗಳೂರು: ಶಿಕ್ಷಕಿಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಸಮಿತಿ ರಚಿಸಬೇಕು ಎಂದು ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಲತಾ ಎಸ್‌.ಮುಳ್ಳೂರ, ‘‌ರಾಜ್ಯದಲ್ಲಿ ಒಟ್ಟು ಶಿಕ್ಷಕ ಸಮುದಾಯದಲ್ಲಿ ಮಹಿಳೆಯರ ಪಾಲು ಶೇ 70ರಷ್ಟಿದೆ. ಅವರ ಮೇಲೆ ನಾನಾ ರೀತಿಯಲ್ಲಿ ದೌರ್ಜನ್ಯಗಳಾಗುತ್ತಿವೆ. ಇದನ್ನು ಬಗೆಹರಿಸಲು ಸೂಕ್ತ ವ್ಯವಸ್ಥೆ ರೂಪಿಸುವ ಅಗತ್ಯವಿದೆ’ ಎಂದರು.

‘ಶಿಕ್ಷಕರ ಸಂಘದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಹಾಗೂ ಶೇ 33ರಷ್ಟು ಮೀಸಲಾತಿ ದೊರೆತಿಲ್ಲ. ಹಾಗಾಗಿ, ಈ ಸಂಘಟನೆ ಸ್ಥಾಪನೆ ಮಾಡಿದ್ದೇವೆ’ ಎಂದು ತಿಳಿಸಿದರು. 

ಸರ್ವ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ), ತರಬೇತಾದ ಪದವೀಧರ ಶಿಕ್ಷಕರು (ಟಿಜಿಟಿ), ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ (ಆರ್‌ಎಮ್‌ಎಸ್‌ಎ) ಅಡಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಸರ್ಕಾರ ಪ್ರತಿ ತಿಂಗಳು ಏಕಕಾಲದಲ್ಲಿ ವೇತನ ನೀಡಬೇಕು ಎಂದು ಮನವಿ ಮಾಡಿದರು.

Post Comments (+)