ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂದಾಲ್‌ಗೆ ಶೀಘ್ರ ಭೇಟಿ ಪ್ರೊ. ಸಿದ್ದರಾಮಯ್ಯ

ಕನ್ನಡಿಗರಿಗೆ ಉದ್ಯೋಗ; ಆಡಳಿತದಲ್ಲಿ ಭಾಷೆ ಬಳಕೆಯ ಪರಾಮರ್ಶೆ
Last Updated 29 ಮೇ 2019, 20:37 IST
ಅಕ್ಷರ ಗಾತ್ರ

ಬೆಂಗಳೂರು: ‘ಬಳ್ಳಾರಿಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಂದಾಲ್‌ ಕಂಪನಿ ಸ್ಥಳೀಯರ ಶ್ರೇಯೋಭಿವೃದ್ಧಿಗೆ ಎಷ್ಟು ಪೂರಕವಾಗಿದೆ ಮತ್ತು ಈ ಪ್ರದೇಶ ಎಷ್ಟರಮಟ್ಟಿನ ಅಭಿವೃದ್ಧಿ ಸಾಧಿಸಿದೆಯೆಂದು ಪರಾಮರ್ಶಿಸುವ ಅಗತ್ಯವಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌. ಜಿ. ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಭರದಲ್ಲಿ ಉದ್ಯೋಗ ಸೃಷ್ಟಿಯ ನೆಪದಲ್ಲಿ ಸ್ಥಳೀಯರ ಜೀವನಕ್ಕೆ ಇಂತಹ ಕಂಪನಿಗಳಿಂದ ಯಾವ ರೀತಿ ಅನುಕೂಲವಾಗುತ್ತದೆ ಎಂಬ ಬಗ್ಗೆ ಆಡಳಿತ ಯಂತ್ರ ಬದ್ಧತೆಯಿಂದ ಯೋಚಿಸಬೇಕು’ ಎಂದೂ ಅವರು ಪತ್ರದಲ್ಲಿ ಕೋರಿದ್ದಾರೆ.

‘ಜಿಂದಾಲ್‌ ಕಂಪನಿ ಶೇ 82ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ಮೀಸಲಿಟ್ಟಿದೆ ಎಂಬಪ್ರಸ್ತಾವವನ್ನು ಪರಿಗಣಿಸಿ ಜಮೀನು ನೀಡಲು ಒಪ್ಪಿರುವುದು ಆತುರದ ನಿರ್ಧಾರದಂತೆ ಕಾಣುತ್ತಿದೆ. ಈ ಸಂಸ್ಥೆಯಲ್ಲಿ ಶೇ 50ಕ್ಕಿಂತಲೂ ಹೆಚ್ಚು ಉದ್ಯೋಗಿಗಳು ಬಿಹಾರ, ಹಿಂದಿ ಭಾಷಿಕರು. ಈ ನೌಕರರು ಸ್ಥಳೀಯರೆನ್ನುವ ರೀತಿಯಲ್ಲಿ ದಾಖಲೆಗಳನ್ನು ನೀಡಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಹಲವು ದೂರುಗಳು ಬಂದಿವೆ’ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT