ಗೌರಿ ಹಂತಕರ ವಿರುದ್ಧ ‘ಕೋಕಾ’ ಅಸ್ತ್ರ

7

ಗೌರಿ ಹಂತಕರ ವಿರುದ್ಧ ‘ಕೋಕಾ’ ಅಸ್ತ್ರ

Published:
Updated:

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಎಸ್‌ಐಟಿ ಅಧಿಕಾರಿಗಳು ಮಂಗಳವಾರ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ) ಅಸ್ತ್ರ ಪ್ರಯೋಗಿಸಿದ್ದಾರೆ.

‘ಕೋಕಾ ಅಡಿ ಪ್ರಕರಣ ದಾಖಲಿಸಬೇಕಾದರೆ, ಆರೋಪಿಗಳ ವಿರುದ್ಧ ಕನಿಷ್ಠ ಎರಡು ಪ್ರಕರಣಗಳಾದರೂ ದಾಖಲಾಗಿರಬೇಕು. ಗೌರಿ ಹತ್ಯೆ ಹಾಗೂ ಸಾಹಿತಿ ಕೆ.ಎಸ್.ಭಗವಾನ್ ಹತ್ಯೆಗೆ ಯತ್ನಿಸಿದ ಆರೋಪಗಳು ಈ ಜಾಲದ ಮೇಲಿವೆ. ಈ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದು, ಕೋಕಾ ‍ಪ್ರಯೋಗ ಮಾಡಲಾಗಿದೆ’ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಐದನೇ ಪ್ರಕರಣ: ಬೆಂಗಳೂರಿನ ಕೆ.ಆರ್.ಪುರದಲ್ಲಿ ಪಾಲಿಕೆ ಸದಸ್ಯೆ ಮಂಜುಳಾ ದೇವಿ ಅವರ ಪತಿ ಸಿರಪುರ ಶ್ರೀನಿವಾಸ್ ಅವರನ್ನು ಹತ್ಯೆಗೈದ 12 ಆರೋಪಿಗಳ ವಿರುದ್ಧ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು 2014ರಲ್ಲಿ ಮೊದಲ ಸಲ ಕೋಕಾ ಪ್ರಯೋಗಿಸಿದ್ದರು.

ಆ ನಂತರ ಶಿವಮೊಗ್ಗದಲ್ಲಿ ಕುಖ್ಯಾತ ಪಾತಕಿ ಬನ್ನಂಜೆ ರಾಜನ ವಿರುದ್ಧ, ಮಂಗಳೂರಿನಲ್ಲಿ ನಾಯಕ್ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಹಾಗೂ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !