ನಾಳೆಯಿಂದ ನಿಮ್ಮ ಮುಂದೆ ‘ಕುಸುಮಬಾಲೆ’

7

ನಾಳೆಯಿಂದ ನಿಮ್ಮ ಮುಂದೆ ‘ಕುಸುಮಬಾಲೆ’

Published:
Updated:

ಬೆಂಗಳೂರು: ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) ವಿದ್ಯಾರ್ಥಿಗಳು ದೇವನೂರ ಮಹಾದೇವರ ‘ಕುಸುಮಬಾಲೆ’ಯನ್ನು ಮತ್ತೊಮ್ಮೆ ರಂಗದ ಮೇಲೆ ತರಲು ಅಣಿಯಾಗಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಸಿ.ಬಸವಲಿಂಗಯ್ಯ,‘ರಾಷ್ಟ್ರೀಯ ನಾಟಕ ಶಾಲೆ ವತಿಯಿಂದ ಇದೇ 15ರಿಂದ ಮಾರ್ಚ್‌ 30ರವರೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದ ಬಿದಿರುಮಳೆಯಲ್ಲಿ ಈ ಪ್ರದರ್ಶನ ನಡೆಯಲಿದೆ’ ಎಂದು ತಿಳಿಸಿದರು.

‘1984ರಲ್ಲಿ ದೇವನೂರ ಮಹಾದೇವ ಅವರು ‘ಕುಸುಮಬಾಲೆ’ಯನ್ನು ರಚಿಸಿದರು. ವಿಧವೆ ಅಕ್ಕಮಹಾದೇವಿಯ ನೋವು, ಕುಸುಮ ಬಾಲೆಯ ಪ್ರೇಮಕಥನ ಅದರಲ್ಲಿದೆ. ದೇವನೂರ ಅವರು ಮುಗ್ಧ ಲೋಕವೊಂದನ್ನು ಅನಾವರಣಗೊಳಿಸಿದ್ದಾರೆ. ಭಾಷೆಯ ಕಾರಣಕ್ಕೂ ಅದು ಭಿನ್ನವಾಗಿ ನಿಲ್ಲುತ್ತದೆ. ಮೂಲ ಆಶಯಕ್ಕೆ ಧಕ್ಕೆ ಆಗದಂತೆ ರಂಗರೂಪಾಂತರ ಮಾಡಲಾಗಿದೆ’ ಎಂದು ಹೇಳಿದರು. 

‘ಮೈಸೂರಿನ ರಂಗಾಯಣದ ವೃತ್ತಿಪರ ಕಲಾವಿದರು 1994ರಲ್ಲಿ ‘ಕುಸುಮಬಾಲೆ’ಯ ಮೊದಲ ರಂಗಪ್ರಯೋಗದ ಪ್ರದರ್ಶನ ನೀಡಿದರು. ಬಳಿಕ ಪಕ್ಕದ ಜಿಲ್ಲೆಗಳಾದ ತುಮಕೂರು, ಕೋಲಾರ ಮತ್ತು ಮೈಸೂರಿನಲ್ಲಿ ಪ್ರದರ್ಶನ ಏರ್ಪಡಿಸಲಾಯಿತು. ಅಲ್ಲಿ ಜನರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಯಿತು. ಅದು ನಮ್ಮನ್ನು ‘ಕುಸಮಬಾಲೆ’ಯನ್ನು ಮತ್ತೆ–ಮತ್ತೆ ಜನರ ಬಳಿಗೆ ತರುವಂತೆ ಮಾಡಿದೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !