ವಿದ್ಯಾರ್ಥಿಗಳಿಂದ ಹೆಸರಘಟ್ಟ ಕೆರೆಯ ಆವರಣ ಸ್ವಚ್ಛತೆ

7

ವಿದ್ಯಾರ್ಥಿಗಳಿಂದ ಹೆಸರಘಟ್ಟ ಕೆರೆಯ ಆವರಣ ಸ್ವಚ್ಛತೆ

Published:
Updated:
Deccan Herald

ಬೆಂಗಳೂರು: ಮಾರಸಂದ್ರದ ಪಿಕೆಬಿ ಪದವಿ ಪೂರ್ವ ಕಾಲೇಜಿನ ಎನ್ಎಸ್‌ಎಸ್‌ ವಿದ್ಯಾರ್ಥಿಗಳು ಹೆಸರಘಟ್ಟ ಗ್ರಾಮದ ಕೆರೆಯ ದಡದಲ್ಲಿ ಬೆಳೆದಿದ್ದ ಗಿಡಗಳು ಮತ್ತು ಕುರುಚಲು ಸಸಿಗಳನ್ನು ಕಿತ್ತು ಸ್ವಚ್ಛಗೊಳಿಸಿದರು. ಕೆರೆಯ ಆಸುಪಾಸಿನಲ್ಲಿ ಬಿಸಾಕಿ ಹೋಗಿದ್ದ ಪ್ಲಾಸ್ಟಿಕ್ ಲೋಟಗಳು, ಮದ್ಯದ ಬಾಟಲಿಗಳನ್ನು ಎತ್ತಿ ಹಾಕಿದರು.

52 ವಿದ್ಯಾರ್ಥಿಗಳು ಐದು ತಂಡಗಳನ್ನು ಮಾಡಿಕೊಂಡು ಕೆರೆಯ ದಡ ಮತ್ತು ದೇವಸ್ಥಾನದ ಸುತ್ತ ಸ್ವಚ್ಛಗೊಳಿಸಿದರು. ಕೆರೆಯ ಬಳಿ ಓಡಾಡುತ್ತಿದ್ದ ಜನರಿಗೆ, ಕೆರೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಕಿವಿ ಮಾತು ಹೇಳಿದರು.

ಪ್ರಾಂಶುಪಾಲ ಕರಗಯ್ಯ ಮಾತನಾಡಿ, ‘ಕೆರೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಕೆರೆಯ ಅಸುಪಾಸಿನಲ್ಲಿ ಬಾಟಲಿಗಳನ್ನು ಬಿಸಾಕಿ ಹೋಗುವ ಹವ್ಯಾಸವನ್ನು ಬಿಡಬೇಕು’ ಎಂದು ಹೇಳಿದರು.

ಹೆಸರಘಟ್ಟ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಬಿ.ಕೃಷ್ಣಯ್ಯ ಅವರು ‘ಜಲಮಂಡಳಿಗೆ ಸೇರಿದ ಕೆರೆ ಇದಾಗಿದೆ. ಆದರೆ ಇಲಾಖೆಯು ಕೆರೆಯನ್ನು
ಅಭಿವೃದ್ಧಿಪಡಿಸದೆ ಕಣ್ಣು ಮುಚ್ಚಿಕೊಂಡಿದೆ. ಕೆರೆಯು ಕಲುಷಿತಗೊಳ್ಳುತ್ತಿದ್ದು, ಜಲಮಂಡಳಿ ಎಚ್ಚೆತ್ತುಕೊಳ್ಳಬೇಕಾಗಿದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !