ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ

7

ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ

Published:
Updated:
Deccan Herald

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. 14 ಸದಸ್ಯರ ಬಲವುಳ್ಳ ಪಂಚಾಯಿತಿಯ ಅಧ್ಯಕ್ಷರಾಗಿ ರೂಪಾ ಕಾರ್ಯನಿರ್ವಹಿಸುತ್ತಿದ್ದರು.

ಪಂಚಾಯಿತಿ ಕಚೇರಿಗೆ ಹಾಜರಾಗುವುದಿಲ್ಲ, ಸಾಮಾನ್ಯ ಸಭೆ ನಡೆಸಿಲ್ಲ. ಇದರಿಂದ ಪಂಚಾಯಿತಿಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಅನ್ನುವ ಕಾರಣದೊಂದಿಗೆ ಹನ್ನೊಂದು ಮಂದಿ ಸದಸ್ಯರು ಒಟ್ಟಾಗಿ ಅಧ್ಯಕ್ಷೆ ರೂಪಾ ವಿರುದ್ಧ ಅವಿಶ್ವಾಸ ಮಂಡಿಸಿದರು. ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಮಹೇಶ್ ಬಾಬು ಅವರು ಈ ಅವಿಶ್ವಾಸ ಗೊತ್ತುವಳಿಗೆ ಚುನಾವಣಾಧಿಕಾರಿಯಾಗಿ ಆಗಮಿಸಿದ್ದರು. ‘14 ಸದಸ್ಯರಲ್ಲಿ 13 ಸದಸ್ಯರು ಹಾಜರಾಗಿದ್ದರು. ಒಬ್ಬ ಮಹಿಳಾ ಸದಸ್ಯರು ಗೈರಾಗಿದ್ದರು. 13 ಜನರಲ್ಲಿ ಅವಿಶ್ವಾಸದ ವಿರುದ್ಧ 11 ಮತಗಳು, ಪರ 2 ಮತಗಳು ಬಂದವು. ಅವಿಶ್ವಾಸ ಅಂಗೀಕಾರವಾಗಿದೆ’ ಎಂದು ಚುನಾವಣಾಧಿಕಾರಿ ತಿಳಿಸಿದರು.  

ಮಾದಕ ವಸ್ತುಗಳ ವಿರುದ್ಧ ಜಾಗೃತಿ- (ದಾಬಸ್‌ಪೇಟೆ): ನೆಲಮಂಗಲ ತಾಲ್ಲೂಕಿನ ಶಿವಗಂಗೆಯ ಶಿವಗಂಗಾ ಪದವಿಪೂರ್ವ ಕಾಲೇಜಿನಲ್ಲಿ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯಿಂದ ’ಸೆಲ್ಫಿ ವಿತ್ ಡ್ರಗ್ಸ್ ಫ್ರೀ' ಕ್ಯಾಂಪಸ್ ಜಾಗೃತಿ ಅಭಿಯಾನ ನಡೆಯಿತು.

ಎಬಿವಿಪಿ ಸಂಘಟನೆಯು ಡಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಇಂತಹ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಹಮ್ಮಿಕೊಂಡಿದೆ ಎಂದು ರಾಜ್ಯ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಜಗದೀಶ್ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !