ಸೋಮವಾರ, ನವೆಂಬರ್ 18, 2019
24 °C

ವಿಮಾನದಲ್ಲಿ ಧೂಮಪಾನ; ಪ್ರಯಾಣಿಕ ಬಂಧನ

Published:
Updated:
Prajavani

ಬೆಂಗಳೂರು: ವಿಮಾನದಲ್ಲಿ ಧೂಮಪಾನ ಮಾಡಿದ ಆರೋಪದಡಿ ಪ್ರಯಾಣಿಕ ಸಂತೋಷ್ ಕುಮಾರ್ (29) ಎಂಬುವರನ್ನು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ. 

‘ಕನ್ಯಾಕುಮಾರಿಯ ಸಂತೋಷ್‌ ಕುಮಾರ್, ಏರ್‌ ಏಷ್ಯಾ ವಿಮಾನದಲ್ಲಿ ಶನಿವಾರ ಪಶ್ಚಿಮ ಬಂಗಾಳ
ದಿಂದ ಬೆಂಗಳೂರಿಗೆ ಬರುತ್ತಿದ್ದರು. ಅದೇ ವೇಳೆ ವಿಮಾನದ ಶೌಚಾಲಯದಲ್ಲಿ ಸಿಗರೇಟ್‌ ಸೇದಿದ್ದರು’ ಎಂದು ಪೊಲೀಸರು ಹೇಳಿದರು.

‘ಹೊಗೆಯನ್ನು ಗಮನಿಸಿದ್ದ ವಿಮಾನದ ಸಿಬ್ಬಂದಿ, ಪರಿಶೀಲನೆ ನಡೆಸಿದ್ದರು. ಸಿಗರೇಟ್, ಬೆಂಕಿ ಹಚ್ಚಲು ಬಳಸುವ ಉಪಕರಣ ಪತ್ತೆಯಾಗಿತ್ತು. ಬಳಿಕ ಆರೋಪಿಯನ್ನು ವಶಕ್ಕೆ ಪಡೆದಿದ್ದರು.’

‘ವಿಮಾನ ಇಳಿಯುತ್ತಿದ್ದಂತೆ ಆರೋಪಿಯನ್ನು ನಮಗೆ ಒಪ್ಪಿಸಿದರು. ಸಹ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)