ಗುರುವಾರ , ಸೆಪ್ಟೆಂಬರ್ 24, 2020
27 °C

ಕಟ್ಟಡದ ಗೋಡೆ ಬಿದ್ದು ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದಲ್ಲಿ ಹಳೆಯ ಕಟ್ಟಡ ಕೆಡುವುತ್ತಿದ್ದ ವೇಳೆ, ಅವಶೇಷಗಳ ಅಡಿ ಸಿಲುಕಿ ಸ್ಥಳೀಯರಾದ ಲಕ್ಷ್ಮಣ (60) ಮತ್ತು ಕಾರ್ಮಿಕ ಶಂಕರಪ್ಪ (35) ಗುರುವಾರ ಮೃತಪಟ್ಟಿದ್ದಾರೆ. 

ದುರ್ಘಟನೆಯಲ್ಲಿ ರಾಯಚೂರಿನ ಮಲ್ಲಪ್ಪ ಗಾಯಗೊಂಡಿದ್ದಾರೆ. ಅವರನ್ನು ಸುಂಕದಕಟ್ಟೆಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

‘ಕಟ್ಟಡದ ಮಾಲೀಕ ಪ್ರಭು, ಒಂದು ಅಂತಸ್ತಿನ ಹಳೆಯ ಕಟ್ಟಡವನ್ನು ಕೆಡವಿ, ಅದರ ಜಾಗದಲ್ಲಿ ಹೊಸದನ್ನು ನಿರ್ಮಿಸಲು ಯೋಜಿಸಿದ್ದರು. ಕಟ್ಟಡ ನೆಲಸಮಗೊಳಿಸುವ ಕೆಲಸ ಗುರುವಾರ ನಡೆದಿತ್ತು. ಸಂಜೆ ಅವಘಡ ಸಂಭವಿಸಿತು’ ಎಂದು ಸ್ಥಳೀಯರು ತಿಳಿಸಿದರು.

ಸ್ಥಳೀಯರ ಕರೆ ಮೇರೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಅವಶೇಷಗಳನ್ನು ತೆರವುಗೊಳಿಸಿ, ಶವಗಳನ್ನು ಹೊರತೆಗೆದರು.

‘ಲಕ್ಷ್ಮಣ ಮತ್ತು ಶಂಕರಪ್ಪ ಸಿಗರೇಟ್‌ ಸೇದುತ್ತ, ಕಟ್ಟಡ ತೆರವು ಕಾರ್ಯಾಚರಣೆ ನೋಡುತ್ತಿದ್ದರು. ಅಚಾನಕ್ಕಾಗಿ ಅವರ ಮೇಲೆ ಗೋಡೆ ಕುಸಿದು ಮೃತಪಟ್ಟರು’ ಎಂದು ದೊಡ್ಡಬಿದರಕಲ್ಲು ವಾರ್ಡ್‌ನ ಪಾಲಿಕೆ ಸದಸ್ಯ ವಾಸುದೇವ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು