‘ನೊಂದವರಿಗೆ ಕಾನೂನಿನ ರಕ್ಷಣೆ ನೀಡಿ: ನ್ಯಾಯಮೂರ್ತಿ ಬಿ.ವಿ.ನಾಗರತ್ನ

ಭಾನುವಾರ, ಏಪ್ರಿಲ್ 21, 2019
26 °C

‘ನೊಂದವರಿಗೆ ಕಾನೂನಿನ ರಕ್ಷಣೆ ನೀಡಿ: ನ್ಯಾಯಮೂರ್ತಿ ಬಿ.ವಿ.ನಾಗರತ್ನ

Published:
Updated:

ರಾಜರಾಜೇಶ್ವರಿನಗರ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ಶ್ರೇಷ್ಠವಾಗಿದ್ದು, ಅದನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸವನ್ನು ಯುವ ವಕೀಲರು ಮಾಡಬೇಕು’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹೇಳಿದರು. 

ಕೆ.ಎಲ್.ಇ. ಕಾನೂನು ಕಾಲೇಜು ಮತ್ತು ಸುರಾನಾ ಕಾನೂನು ಕಾಲೇಜು ಹಮ್ಮಿಕೊಂಡಿದ್ದ ‘ಅಣುಕು ನ್ಯಾಯಾಲಯದ ರಾಷ್ಟ್ರೀಯ ಸ್ಪರ್ಧಾ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಎಂತಹ ಸಂದರ್ಭ ಬಂದರೂ ಕಾನೂನು ಪರಿಪಾಲನೆ ಮಾಡಬೇಕು. ಸಾರ್ವಜನಿಕ ಜೀವನದಲ್ಲಿ ಗೌರವ ಹೆಚ್ಚಿಸಿಕೊಳ್ಳಬೇಕು. ಬುದ್ಧಿವಂತಿಕೆ, ಕೌಶಲ, ಛಲ, ಸೌಜನ್ಯ, ವಿನಯವಂತಿಕೆ ಸಂಪಾದಿಸಬೇಕು. ನೊಂದವರಿಗೆ ಸಹಕಾರ ಹಸ್ತ ಚಾಚಬೇಕು. ಹಣಗಳಿಕೆಗೊಸ್ಕರ ನ್ಯಾಯದ ದಾರಿ ಬಿಡಬಾರದು’ ಎಂದು ಕಿವಿಮಾತು ಹೇಳಿದರು.

‘ಕಾಣದ ಕೈಗಳಿಂದ ನರಳುತ್ತಿರುವ ಬಡವರು, ನೊಂದವರು ನ್ಯಾಯಕ್ಕಾಗಿ ಇಂದು ಬರುತ್ತಿದ್ದಾರೆ. ಅವರಿಗೆ ಕಾನೂನಿನ ರಕ್ಷಣೆ ನೀಡಿದರೆ ವೃತ್ತಿ ಬದುಕು ಸಾರ್ಥಕವಾಗುತ್ತದೆ’ ಎಂದು ಕಿವಿಮಾತು ಹೇಳಿದರು. 

ರಾಷ್ಟ್ರೀಯ ಕಾನೂನು ಕಾಲೇಜಿನ ಕುಲಪತಿ ಆರ್.ವೆಂಕಟರಾವ್, ‘ಎಲ್ಲ ವಕೀಲರು ಅಧ್ಯಯನದ ಕಡೆ ಗಮನ ಹರಿಸಬೇಕು. ಕಕ್ಷಿದಾರನಿಗೆ ನೋವಾಗದಂತೆ ನ್ಯಾಯ ದೊರಕಿಸಿಕೊಡಬೇಕು’ ಎಂದರು. 

ದೇಶದ ವಿವಿಧ ನಗರಗಳಲ್ಲಿನ ಕಾನೂನು ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !