ಶನಿವಾರ, ನವೆಂಬರ್ 23, 2019
22 °C

ಎಚ್‌.ಕೆ.ಪಾಟೀಲ ಪಿಎಸಿ ಅಧ್ಯಕ್ಷ

Published:
Updated:

ಬೆಂಗಳೂರು: ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲಾಗಿದ್ದು, ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿಗೆ ಕಾಂಗ್ರೆಸ್‌ನ ಹಿರಿಯ ಶಾಸಕ ಎಚ್‌.ಕೆ.ಪಾಟೀಲ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಕಾಂಗ್ರೆಸ್‌ನಲ್ಲಿ ವಿಧಾನಸಭಾ ವಿರೋಧ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಪಾಟೀಲ ಅವರೂ ಈ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ. ಸಾಮಾನ್ಯವಾಗಿ ಪಕ್ಷ ಸೂಚಿಸಿದವರನ್ನೇ ಪಿಎಸಿ ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಆದರೆ, ಎಚ್‌.ಕೆ.ಪಾಟೀಲ ನೇಮಕ ಕುತೂಹಲಕ್ಕೆ ಕಾರಣವಾಗಿದೆ.

ವಿವರ: ಸಾರ್ವಜನಿಕ ಉದ್ದಿಮೆಗಳ ಸಮಿತಿ– ಅರವಿಂದ ಲಿಂಬಾವಳಿ, ಎಸ್‌ಸಿ/ಎಸ್‌ಟಿಗಳ ಸಮಿತಿ– ಎಸ್‌.ಅಂಗಾರ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ– ಎಸ್‌.ಕುಮಾರ್‌ ಬಂಗಾರಪ್ಪ, ಅಧೀನ ಶಾಸನ ರಚನಾ ಸಮಿತಿ– ಎಸ್‌.ಎ.ರಾಮದಾಸ್, ಸಭೆ ಮುಂದಿಡಲಾದ ಕಾಗದ ಪತ್ರಗಳ ಸಮಿತಿ– ಸಾ.ರಾ.ಮಹೇಶ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ– ಕೆ. ಪೂರ್ಣಿಮಾ, ಗ್ರಂಥಾಲಯ ಸಮಿತಿ– ಎಸ್‌.ಆರ್‌.ವಿಶ್ವನಾಥ್‌, ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿ– ಆರಗ ಜ್ಞಾನೇಂದ್ರ, ಅಂದಾಜುಗಳ ಸಮಿತಿ– ಸಿ.ಎಂ.ಉದಾಸಿ, ಸರ್ಕಾರಿ ಭರವಸೆಗಳಸಮಿತಿ– ಬಸನಗೌಡ ಪಾಟೀಲ ಯತ್ನಾಳ್, ಹಕ್ಕು ಬಾಧ್ಯತೆಗಳ ಸಮಿತಿ–ಎಸ್‌.ಎ.
ರವೀಂದ್ರನಾಥ್‌, ಖಾಸಗಿ ಸದಸ್ಯರುಗಳ ವಿಧೇಯಕ ಹಾಗೂ ನಿರ್ಣಯಗಳ ಸಮಿತಿ, ಅರ್ಜಿಗಳ ಸಮಿತಿ ಮತ್ತು ವಸತಿ ಸೌಕರ್ಯ ಸಮಿತಿ– ಎಂ.ಕೃಷ್ಣಾರೆಡ್ಡಿ.

ಪ್ರತಿಕ್ರಿಯಿಸಿ (+)