ಕೊಳಚೆ ನೀರು ಶುದ್ಧೀಕರಣ ಗುಣಮಟ್ಟದ ಮೇಲೆ ನಿಗಾ

ಭಾನುವಾರ, ಜೂನ್ 16, 2019
22 °C

ಕೊಳಚೆ ನೀರು ಶುದ್ಧೀಕರಣ ಗುಣಮಟ್ಟದ ಮೇಲೆ ನಿಗಾ

Published:
Updated:

ಬೆಂಗಳೂರು: ಜಲಮಂಡಳಿಯು ತೃತೀಯ ಹಂತದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿಂದ (ಟಿಟಿಪಿ) ನೀರಿನ ಶುದ್ಧೀಕರಣದ ಕುರಿತ ನೈಜ ಮಾಹಿತಿ ಪಡೆಯಲು ಲಾಲ್‌ಬಾಗ್‌ ಹಾಗೂ ಕಬ್ಬನ್‌ ಉದ್ಯಾನಗಳಲ್ಲಿ ‘ಕೊಳಚೆ ನೀರು ಶುದ್ಧೀಕರಣ ಗುಣಮಟ್ಟ ನಿಗಾ ವ್ಯವಸ್ಥೆ’ಯನ್ನು ಜಾರಿಗೆ ತರಲು ಮುಂದಾಗಿದೆ.

ಈ ನಿಗಾ ವ್ಯವಸ್ಥೆಯು ನೀರಿನ ಮಾಲಿನ್ಯಕಾರಕ ಅಂಶಗಳ ಕುರಿತು ಮಾಹಿತಿ ನೀಡಲಿದೆ. 

ಶುದ್ಧೀಕರಣಗೊಂಡ ಬಹುತೇಕ ನೀರು ಎರಡು ಉದ್ಯಾನಗಳಲ್ಲಿರುವ ಸಸ್ಯಗಳಿಗೆ ನೀರುಣಿಸಲು ಬಳಕೆಯಾಗುತ್ತಿದೆ. ಆದರೂ ಸಹ ಜಲಮಂಡಳಿಗೆ ಉದ್ಯಾನಗಳ ಬೇಡಿಕೆಗೆ ತಕ್ಕಂತೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಎರಡು ಉದ್ಯಾನಗಳು ಸುಧಾರಿತ ತಂತ್ರಜ್ಞಾನದ ಟಿಟಿಪಿಗಳನ್ನು ಹೊಂದಿವೆ. 

ಲಾಲ್‌ಬಾಗ್‌ನಲ್ಲಿರುವ ಟಿಟಿಪಿ 40 ಲಕ್ಷ ಲೀಟರ್‌ ಸಾಮರ್ಥ್ಯವನ್ನು ಹೊಂದಿದ್ದರೆ, ಕಬ್ಬನ್‌ ಉದ್ಯಾನದಲ್ಲಿಯ ಟಿಟಿಪಿ 15 ಲಕ್ಷ ಲೀಟರ್ ಸಾಮರ್ಥ್ಯ ಹೊಂದಿದೆ. ಶುದ್ಧೀಕರಣಗೊಂಡ ನೀರು ಉದ್ಯಾನಗಳಿಗೆ ಹೋಗುವ ಸ್ಥಳದಲ್ಲಿ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಆ ಸೆನ್ಸರ್‌ಗಳು ನೀರು ಪರೀಕ್ಷೆಗೊಳಪಡಿಸುತ್ತವೆ. ಅದರ ಮಾಲಿನ್ಯಕಾರಗಳನ್ನು ಪತ್ತೆ ಹಚ್ಚಿ 15 ನಿಮಿಷಕ್ಕೊಮ್ಮೆ ಮಾಹಿತಿಯನ್ನು ಜಲಮಂಡಳಿಯ ತಾಂತ್ರಿಕ ತಂಡಕ್ಕೆ ರವಾನೆ ಮಾಡುತ್ತವೆ.

ನೀರನ್ನು ಪರೀಕ್ಷೆಗೆ ಒಳಪಡಿಸುವಾಗ ಪಿಎಚ್‌ ಮೌಲ್ಯ, ತಾಪಮಾನ, ಜೀವರಾಸಾಯನಿಕ ಆಮ್ಲಜನಕ ಬೇಡಿಕೆ (ಬಿಒಡಿ), ರಾಸಾಯನಿಕ ಆಮ್ಲಜನಕ ಬೇಡಿಕೆ(ಸಿಒಡಿ), ಕರಗಿದ ಆಮ್ಲಜನಕ, ಅಮೋನಿಯಾ(NH-3) ಹಾಗೂ ಇತರ ಅಂಶಗಳನ್ನು ಸೆನ್ಸರ್‌ಗಳು ಪರಿಗಣಿಸುತ್ತವೆ. ನೀರಿನ ಮಾದರಿ ಸಂಗ್ರಹಿಸಿ ಅದನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿ ಪರೀಕ್ಷೆಗೊಳಪಡಿಸಿ ಅದರ ವರದಿ ಕೊಡಲು ಐದು ದಿನ ಬೇಕಾಗುತ್ತಿತ್ತು. ಅದನ್ನು ತಪ್ಪಿಸಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಈ ಸಂಬಂಧ ಜಲಮಂಡಳಿ ಟೆಂಡರ್ ಕರೆದಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !