ವಿಡಿಯೊ ಕರೆ ಮಾಡಿ ಬೆತ್ತಲೆ ನಿಲ್ಲುತ್ತಿದ್ದ!

7
ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆಂಧ್ರದ ಯುವಕ ಸೆರೆ

ವಿಡಿಯೊ ಕರೆ ಮಾಡಿ ಬೆತ್ತಲೆ ನಿಲ್ಲುತ್ತಿದ್ದ!

Published:
Updated:

ಬೆಂಗಳೂರು: ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೊ ಹಾಗೂ ಸಂದೇಶಗಳನ್ನು ಕಳುಹಿಸುತ್ತಿದ್ದ ಭಾರ್ಗವ್ (21) ಎಂಬಾತನನ್ನು ಅಶೋಕನಗರ ‍ಪೊಲೀಸರು ಆಂಧ್ರಪ್ರದೇಶದ ಹಿಂದೂಪುರದಲ್ಲಿ ಬಂಧಿಸಿದ್ದಾರೆ.

ಮೊದಲು ‌ಲಾಲ್‌ಬಾಗ್ ರಸ್ತೆಯ ಪ್ರತಿಷ್ಠಿತ ಕಾಲೇಜುವೊಂದರಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದ ಭಾರ್ಗವ್, ಮೂರು ವಿಷಯಗಳಲ್ಲಿ ಅನುತ್ತೀರ್ಣನಾಗಿ ಕಾಲೇಜು ತೊರೆದಿದ್ದ. ಹಿಂದೆ ಸಹಪಾಠಿಗಳಾಗಿದ್ದ ಕೆಲ ವಿದ್ಯಾರ್ಥಿನಿಯರ ಮೊಬೈಲ್ ಸಂಖ್ಯೆಯನ್ನು ತನ್ನ ಬಳಿ ಇಟ್ಟುಕೊಂಡಿದ್ದ ಆತ, ‘ನಿನ್ನ ದೇಹಸಿರಿ ಚೆನ್ನಾಗಿದೆ. ಸೊಂಟ ಚೆನ್ನಾಗಿದೆ. ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇದೆಯೇ....’ ಎಂದು ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಭಾರ್ಗವ್‌ನ ವರ್ತನೆ ಬಗ್ಗೆ ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿ
ರಲಿಲ್ಲ. ಈ ನಡುವೆ ಆತ ಅಶ್ಲೀಲ ವಿಡಿಯೊ
ಗಳನ್ನೂ ಕಳುಹಿಸಲು ಶುರುವಿಟ್ಟಿದ್ದರಿಂದ ಪೊಲೀಸರಿಗೆ ದೂರು ಕೊಡುವುದಾಗಿ ಎಚ್ಚರಿಸಿದ್ದರು. ಆ ನಂತರ ಕ್ಷಮೆಯಾಚಿಸಿ ನಾಲ್ಕೈದು ದಿನ ಸುಮ್ಮನಾಗಿದ್ದ ಆರೋಪಿ, ನಂತರ ನಕಲಿ ದಾಖಲೆ ಸಲ್ಲಿಸಿ ಹೊಸ ಸಿಮ್
ಖರೀದಿಸಿದ್ದ.

ಆ ಸಂಖ್ಯೆಯಿಂದ ರಾತ್ರಿ ವೇಳೆ ಮೂವರು ವಿದ್ಯಾರ್ಥಿನಿಯರಿಗೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಕಾಲ್ ಮಾಡಿ ಕೆಟ್ಟದಾಗಿ ಮಾತನಾಡುತ್ತಿದ್ದ. ಅಲ್ಲದೆ, ಬೆತ್ತಲಾಗಿ ನಿಂತುಕೊಂಡು ಲೈಂಗಿಕ ಕ್ರಿಯೆಗೆ ಕರೆಯುತ್ತಿದ್ದ. ಮುಖ ಮುಚ್ಚಿಕೊಂಡು ಮಾತನಾಡಿದ್ದರಿಂದ ಆತ ಯಾರೆಂಬುದು ವಿದ್ಯಾರ್ಥಿನಿ
ಯರಿಗೂ ಗೊತ್ತಾಗಿರಲಿಲ್ಲ. ಕೊನೆಗೆ, ಅವರು ಪ್ರಾಂಶುಪಾಲರಿಗೆ ದೂರು ಕೊಟ್ಟಿದ್ದರು.

ಗಂಗಾಧರ್ ವಿರುದ್ಧ ದೂರು: ‘ಟ್ರೂ ಕಾಲರ್‌ನಲ್ಲಿ ಆ ಸಂಖ್ಯೆ ಪರಿಶೀಲಿಸಿದಾಗ ಎಂ.ಗಂಗಾಧರ್ ಎಂಬ ಹೆಸರು ಬಂತು. ಹೀಗಾಗಿ, ಆರಂಭದಲ್ಲಿ ಅದೇ ಹೆಸರಿನಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದೆವು. ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದಾಗ, ‘ಕೆಲ ದಿನಗಳ ಹಿಂದೆ ಸ್ನೇಹಿತ ಭಾರ್ಗವ್ ಕೂಡ ಇದೇ ರೀತಿ ಕಿರುಕುಳ ನೀಡುತ್ತಿದ್ದ’ ಎಂದು ಹೇಳಿದರು. ಆತನ ಮೊಬೈಲ್ ಸಂಖ್ಯೆ ಹಾಗೂ ವಿಡಿಯೊ ಕರೆಗಳು ಬರುತ್ತಿದ್ದ ಸಂಖ್ಯೆಯನ್ನು ಪರಿಶೀಲಿಸಿದಾಗ, ಎರಡೂ ಒಂದೇ ಪ್ರದೇಶದ ಟವರ್‌ನಿಂದ ಸಂಪರ್ಕ ಪಡೆದಿದ್ದವು’ ಎಂದು ಹಿರಿಯ ಅಧಿಕಾರಿಯೊಬ್ಬರು ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಎಸ್‌ಐ ಎಂ.ಕುಮಾರ್ ನೇತೃತ್ವದ ತಂಡವನ್ನು ಹಿಂದೂಪುರಕ್ಕೆ ಕಳುಹಿಸಿದೆವು. ಭಾರ್ಗವ್‌ನನ್ನು ವಶಕ್ಕೆ ಪಡೆದು ಶನಿವಾರ ಸಂಜೆ ನಗರಕ್ಕೆ ಕರೆತರಲಾಯಿತು. ತಪ್ಪೊಪ್ಪಿಕೊಂಡಿರುವ ಆತ, ‘ತಿಳಿಯದೆ ತಪ್ಪು ಮಾಡಿದೆ. ಇನ್ನು ಮುಂದೆ ಯಾರ ತಂಟೆಗೂ ಹೋಗುವುದಿಲ್ಲ’ ಎಂದು ಕಣ್ಣೀರಿಟ್ಟಿದ್ದಾನೆ. ಭಾರ್ಗವ್ ಆತಂಕಕ್ಕೆ ಒಳಗಾಗಿದ್ದು, ಪೋಷಕರ ಸಮ್ಮುಖದಲ್ಲೇ ಆಪ್ತ ಸಮಾಲೋಚನೆ ಮಾಡಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಪಿ.ಜಿ.ಕಟ್ಟಡದ ಮಾಲೀಕನ ವಿರುದ್ಧ ದೂರು

ಬೆಂಗಳೂರು: ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಮಾಲೀಕರು ನಿರಾಕರಿಸಿದ್ದಕ್ಕೆ ಪೊಲೀಸರಿಗೆ ಕರೆ ಮಾಡಿದ ಯುವತಿಯೊಬ್ಬರು, ‘ನಮ್ಮ ಕಟ್ಟಡದಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿಲ್ಲ. ಅ.2ರ ರಾತ್ರಿ ಯುವಕನೊಬ್ಬ ಕಟ್ಟಡಕ್ಕೆ ನುಗ್ಗಿ ನಮ್ಮ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ’ ಎಂದು ದೂರಿದ್ದಾರೆ.

ಶಾಂತಿನಗರದ ಬಿಟಿಎಸ್ ರಸ್ತೆಯಲ್ಲಿರುವ ‘ಶ್ರೀ ವೆಂಕಟೇಶ್ವರ’ ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ 30ಕ್ಕೂ ಹೆಚ್ಚು ಯುವತಿಯರು ನೆಲೆಸಿದ್ದಾರೆ. ದೂರು ಬಂದ ಕೂಡಲೇ ಮಹಿಳಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಟ್ಟಡದ ವಾಸಿಗಳನ್ನು ವಿಚಾರಣೆ ನಡೆಸಿದ್ದಾರೆ.  ‘ಇಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಇಲ್ಲ. ಸೆಕ್ಯುರಿಟಿ ಗಾರ್ಡ್ ಕೂಡ ಇಲ್ಲ. ಯಾರ‍್ಯಾರೋ ಒಳಗೆ ಬಂದು ಹೋಗುತ್ತಿರುತ್ತಾರೆ. ಈ ವಿಷಯವನ್ನು ಮಾಲೀಕರ ಗಮನಕ್ಕೆ ತಂದರೆ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದು ಅವರು ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದರು.

ದೂರು ಕೊಟ್ಟಿದ್ದಕ್ಕೆ ಯುವತಿ ವಿರುದ್ಧ ಕುಪಿತಗೊಂಡ ಕಟ್ಟಡದ ಮಾಲೀಕ ದ್ವಾರಕನಾಥ ರೆಡ್ಡಿ, ಕೊಠಡಿ ಖಾಲಿ ಮಾಡುವಂತೆ ಆಕೆಗೆ ಸೂಚಿಸಿದ್ದರು. ಹೀಗಾಗಿ, ರೆಡ್ಡಿ ಅವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದೇವೆ. ವಾರದೊಳಗೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಎಫ್‌ಐಆರ್ ದಾಖಲಿಸಿ ಬಂಧಿಸುವುದಾಗಿಯೂ ಹೇಳಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !