ಸೋಮವಾರ, ಸೆಪ್ಟೆಂಬರ್ 16, 2019
22 °C

ಕಾಡುಕೋಣ ದಾಳಿ: ಕಾರ್ಮಿಕ ಸಾವು

Published:
Updated:

ಬಾಳೆಹೊನ್ನೂರು: ಕಾಡುಕೋಣದ ದಾಳಿಗೆ ತುತ್ತಾಗಿ ಕಾರ್ಮಿಕ ಮೃತಪಟ್ಟ ಘಟನೆ ಇಲ್ಲಿನ ಕಡವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಗರಗ ಗ್ರಾಮದ ಶೇಷಪ್ಪ (65) ಮೃತರು. ಕಡವಂತಿಯ ಬಾಳೆಖಾನ್ ಎಸ್ಟೇಟ್‌ನಲ್ಲಿ ಅವರು ಕಾರ್ಮಿಕನಾಗಿ ದುಡಿಯುತ್ತಿದ್ದರು. ಶುಕ್ರವಾರ ರಾತ್ರಿ ಮನೆಗೆ ವಾಪಸ್‌ ತೆರಳುವ ದಾರಿ ಮಧ್ಯದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಮೇಲ್ನೋಟಕ್ಕೆ ಕಾಡುಕೋಣ ತಿವಿದು ಕಾರ್ಮಿಕ ಮೃತಪಟ್ಟ ಶಂಕೆ ವ್ಯಕ್ತವಾಗಿದ್ದು, ವೈದ್ಯರು ನೀಡುವ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬಾಳೆಹೊನ್ನೂರಿನ ಆರ್‌ಎಫ್‍ಒ ತನುಜ್ ಕುಮಾರ್ ತಿಳಿಸಿದ್ದಾರೆ.

Post Comments (+)