ಭೋಪಾಲ್: ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಸಂಭ್ರಮಿಸುವುದಕ್ಕಾಗಿ ಆ.4 ಮತ್ತು ಆ.5ರಂದು ಸಾರ್ವಜನಿಕರು ತಮ್ಮ ಮನೆಯ ಅಂಗಳದಲ್ಲಿ ದೀಪಗಳನ್ನು ಬೆಳಗಿ, ‘ಹನುಮಾನ್ ಚಾಲೀಸ್’ ಮಂತ್ರ ಮತ್ತು ರಾಮಾಯಣದ ’ಸುಂದರಕಾಂಡ’ವನ್ನು ಪಠಿಸುವಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವಾರಾಜ್ ಸಿಂಗ್ ಚೌಹಾಣ್ ಮನವಿ ಮಾಡಿದ್ದಾರೆ.

ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ಚಿಕಿತ್ಸೆಪಡೆಯುತ್ತಿರುವ ಅವರು ಸೋಮವಾರ ಆಸ್ಪತ್ರೆಯಿಂದಲೇ ವಿಡಿಯೊ ಸಂದೇಶದ ಮೂಲಕ ಸಾರ್ವಜನಿಕರಲ್ಲಿ ಈ ರೀತಿ ಮನವಿ ಮಾಡಿದ್ದಾರೆ.

’ಆಗಸ್ಟ್ 4 ಮತ್ತು 5ರಂದು ತಮ್ಮ ತಮ್ಮ ಮನೆಗಳನ್ನುವಿದ್ಯುತ್ ದೀಪಗಳಿಂದ ಅಲಂಕರಿಸುವ ಮೂಲಕ ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮವನ್ನು ಸಂಭ್ರಮಿಸಿ’ ಎಂದು ಮನವಿ ಮಾಡಿದ್ದಾರೆ.

ಆಗಸ್ಟ್ 5 ರಂದು ಭೂಮಿ ಪೂಜೆ ಅಂಗವಾಗಿಮಧ್ಯಪ್ರದೇಶದ ನಿವಾರಿ ಜಿಲ್ಲೆಯಲ್ಲಿರುವ ಪ್ರಸಿದ್ಧ ’ರಾಮ ರಾಜ’ ದೇವಾಲಯ ಹಾಗೂ ಚಿತ್ರಕೂಟದಲ್ಲಿರುವ ದೇವಾಲಯಗಳು ಸೇರಿದಂತೆ ರಾಜ್ಯದ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಲಿದೆ. ಆದರೆ, ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಯಾವ ಕಾರಣಕ್ಕೂ ಸಾರ್ವಜನಿಕರು ದೇವಾಲಯಗಳಿಗೆ ಗುಂಪು ಗುಂಪಾಗಿ ತೆರಳದೇ ಮನೆಯಲ್ಲಿದ್ದುಕೊಂಡೇ ಭೂಮಿ ಪೂಜೆ ಕಾರ್ಯಕ್ರಮದ ಭಾಗವಾಗುವಂತೆ’ ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.