ಶುಕ್ರವಾರ, ಆಗಸ್ಟ್ 7, 2020
22 °C

ಬಾಲ್ಟಿಮೋರ್:ಕ್ರಿಸ್ಟೋಫರ್ ಕೊಲಂಬಸ್‌ ಪ್ರತಿಮೆ ಧ್ವಂಸ

ಎಪಿ Updated:

ಅಕ್ಷರ ಗಾತ್ರ : | |

Prajavani

ಬಾಲ್ಟಿಮೋರ್: ಲಿಟಲ್‌ ಇಟಲಿ ಬಳಿ ಇರುವ ಕ್ರಿಸ್ಟೋಫರ್ ಕೊಲಂಬಸ್‌ನ ಪ್ರತಿಮೆಯನ್ನು ಇಲ್ಲಿನ ಪ್ರತಿಭಟನಕಾರರು ಹಗ್ಗದ ಸಹಾಯದಿಂದ ಕೆಡವಿ ನಗರದ ಇನ್ನರ್ ಹಾರ್ಬರ್‌ನಲ್ಲಿ ಶನಿವಾರ ಎಸೆದಿದ್ದಾರೆ. 

ಮೇ 25ರಂದು ಅಮೆರಿಕದಲ್ಲಿ ಪೊಲೀಸರ‌ ದೌರ್ಜನ್ಯದಿಂದ ಆಫ್ರೋ–ಅಮೆರಿಕನ್ ಜಾರ್ಜ್‌ ಫ್ಲಾಯ್ಡ್ ಸಾವನ್ನಪ್ಪಿದ್ದರು. ಇದನ್ನು ಖಂಡಿಸಿ ಬಾಲ್ಟಿಮೋರ್‌ನಲ್ಲಿ ಆರಂಭಗೊಂಡಿರುವ ಪ್ರತಿಭಟನೆ ಇನ್ನೂ ನಿಂತಿಲ್ಲ. ಅಮೆರಿಕದ ಸ್ಥಳೀಯ ಜನರ ನರಮೇಧ ಮತ್ತು ಶೋಷಣೆಗೆ ಇಟಲಿಯ ಅನ್ವೇಷಕ ಕ್ರಿಸ್ಟೋಫರ್ ಕೊಲಂಬಸ್ ಕಾರಣ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಮಿಯಾಮಿ, ರಿಚ್ಮಂಡ್, ವರ್ಜಿನಿಯಾ, ಸೇಂಟ್ ಪಾಲ್, ಮಿನ್ನೆಸೋಟಾ ಮತ್ತು ಬಾಸ್ಟನ್‌‌‌ನಲ್ಲೂ ಪ್ರತಿಭಟನಕಾರರು ಕ್ರಿಸ್ಟೋಫರ್ ಕೊಲಂಬಸ್‌ನ ಪ್ರತಿಮೆಯನ್ನು ಧ್ವಂಸ ಮಾಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು