ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update | ಮಹಾರಾಷ್ಟ್ರದಲ್ಲಿ 5134 ಹೊಸ ಪ್ರಕರಣ, 224 ಸಾವು

Last Updated 7 ಜುಲೈ 2020, 15:24 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಹರಡುವಿಕೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ಮಂಗಳವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 5,134 ಹಾಗೂ ತಮಿಳುನಾಡಿನಲ್ಲಿ 3,616 ಹೊಸ ಪ್ರಕರಣಗಳು ದೃಢಪಟ್ಟಿವೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 224 ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,17,121 ತಲುಪಿದ್ದು, 9250 ಮಂದಿ ಮೃತಪಟ್ಟಿದ್ದಾರೆ. 1,18,558 ಜನ ಈವರೆಗೆ ಗುಣಮುಖರಾಗಿದ್ದಾರೆ. ಸದ್ಯ 89,294 ಸಕ್ರಿಯ ಪ್ರಕರಣಗಳಿವೆ. ಮುಂಬೈಯ ಧಾರಾವಿಯಲ್ಲಿ 1 ಹೊಸ ಪ್ರಕರಣ ದೃಢಪಟ್ಟಿದೆ.

ತಮಿಳುನಾಡಿನಲ್ಲಿ ಮಂಗಳವಾರ ಕೊರೊನಾದಿಂದಾಗಿ 65 ಸಾವು ಸಂಭವಿಸಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,18,594ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 1636 ತಲುಪಿದೆ. ಸದ್ಯ 45839 ಸಕ್ರಿಯ ಪ್ರಕರಣಗಳಿವೆ.

ಮಣಿಪುರದಲ್ಲಿ 40, ಉತ್ತರಾಖಂಡದಲ್ಲಿ 69, ಮಧ್ಯ ಪ್ರದೇಶದಲ್ಲಿ 343, ಗುಜರಾತ್‌ನಲ್ಲಿ 778, ದೆಹಲಿಯಲ್ಲಿ 2008, ಕರ್ನಾಟಕದಲ್ಲಿ 1,498, ಗೋವಾದಲ್ಲಿ 90, ಪಶ್ಚಿಮ ಬಂಗಾಳದಲ್ಲಿ 850 ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT