ಶನಿವಾರ, ಜೂನ್ 19, 2021
26 °C

ಲಖನೌ–ಆಗ್ರಾ ಹೆದ್ದಾರಿಯಲ್ಲಿ ಬಸ್‌ ಅ‍ಪಘಾತ: 6 ಮಂದಿ ಸಾವು, 20 ಮಂದಿಗೆ ಗಾಯ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಲಖನೌ–ಆಗ್ರಾ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿರುವ ಬಸ್‌–ಎಎನ್‌ಐ ಚಿತ್ರ

ಲಖನೌ: ಲಖನೌ–ಆಗ್ರಾ ಹೆದ್ದಾರಿಯಲ್ಲಿ ಖಾಸಗಿ ಅಪಘಾತಕ್ಕೀಡಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. ನಿಂತಿದ್ದ ಎಸ್‌ಯುವಿಗೆ ಗುದ್ದಿದ ಪರಿಣಾಮ ಬಸ್‌ ಉರುಳಿ ಬಿದ್ದಿದೆ.

ಉತ್ತರ ಪ್ರದೇಶದ ಕನೌಜ್‌ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ 5:15ಕ್ಕೆ ಈ ಅಪಘಾತ ನಡೆದಿದೆ. ಬಸ್‌ ಬಿಹಾರದ ದರಭಂಗಾದಿಂದ ದೆಹಲಿಯ ಕಡೆಗೆ ಹೊರಟಿದ್ದ ಬಸ್‌ ಲಖನೌದಿಂದ 122 ಕಿ.ಮೀ. ದೂರದ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ 6 ಮಂದಿ ಸಾವಿಗೀಡಾಗಿದ್ದು ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

'40 ಪ್ರಯಾಣಿಕರಿದ್ದ ಖಾಸಗಿ ಬಸ್‌ ಹೆದ್ದಾರಿಯಲ್ಲಿ ನಿಂತಿದ್ದ ಎಸ್‌ಯುವಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬಸ್‌ ಉರುಳಿ ಬಿದ್ದು ಸ್ಥಳದಲ್ಲಿಯೇ 5 ಪ್ರಯಾಣಿಕರು ಮೃತಪಟ್ಟಿದ್ದಾರೆ. ಮತ್ತೊಬ್ಬ ಪ್ರಯಾಣಿಕ ಆಸ್ಪತ್ರೆಗೆ ಸೇರಿಸುವುದಕ್ಕೂ ಮುನ್ನ ಸಾವಿಗೀಡಾಗಿದ್ದಾರೆ. ಸುಮಾರು 20 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ಪ್ರಯಾಣಿಕರ ಪರಿಸ್ಥಿತಿ ಗಂಭೀರವಾಗಿದೆ ಎಂದು ಕನೌಜ್‌ ಎಸ್ಪಿ ಅಮರೇಂದ್ರ ಪಿಡಿ ಸಿಂಗ್‌ ಹೇಳಿದ್ದಾರೆ. ಈ ಕುರಿತು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಎಸ್‌ಯುವಿ ನಿಂತಿರುವುದನ್ನು ಬಸ್‌ ಚಾಲಕ ಗಮನಿಸಿಲ್ಲ ಹಾಗೂ ಡಿಕ್ಕಿಯ ನಂತರ ಬಸ್‌ ನಿಯಂತ್ರಿಸಲು ಸಾಧ್ಯವಾಗದೆ ಉರುಳಿರುವಂತೆ ತೋರುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೃತರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ಪ್ರಯಾಣಿಕರಿಗೆ ಸೂಕ್ತ ಚಿಕಿತ್ಸೆ ವ್ಯಕ್ತ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು