ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ತಿನ ಸಹಕಾರ ಸಂಘದ ಹಗರಣ: ಗಜೇಂದ್ರ ಶೇಖಾವತ್‌‌ ವಿರುದ್ಧ ತನಿಖೆಗೆ ನಿರ್ದೇಶನ

Last Updated 23 ಜುಲೈ 2020, 10:55 IST
ಅಕ್ಷರ ಗಾತ್ರ

ಜೈಪುರ: ಪತ್ತಿನ ಸಹಕಾರ ಸಂಘವೊಂದರ ಹಗರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌‌ ವಿರುದ್ಧ ದಾಖಲಾಗಿರುವ ದೂರಿನ ತನಿಖೆ ನಡೆಸುವಂತೆ ನಗರದ ನ್ಯಾಯಾಲಯವೊಂದು ರಾಜಸ್ಥಾನ ಪೊಲೀಸರಿಗೆ ನಿರ್ದೇಶನ ನೀಡಿದೆ.

ಸಚಿವ ಶೇಖಾವತ್‌ ಅವರು, ಅಶೋಕ್‌ ಗೆಹ್ಲೋಟ್‌ ನೇತೃತ್ವದ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಇದರ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಶಾಸಕರನ್ನು ಕಾಂಗ್ರೆಸ್‌ನಿಂದ ಸೆಳೆಯುವ ಪ್ರಯತ್ನಕ್ಕೆ ಸಂಬಂಧಿಸಿದೆ ಎನ್ನಲಾಗಿರುವ ಆಡಿಯೊ ತುಣುಕುಗಳ ದೃಶ್ಯಾವಳಿ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ಕಾರ್ಯನಿರ್ವಹಣಾ ದಳವು (ಎಸ್‌ಒಜಿ) ಈಗಾಗಲೇ ಗಜೇಂದ್ರ ಸಿಂಗ್‌ ಅವರಿಗೆ ನೋಟಿಸ್‌ ಜಾರಿಮಾಡಿದೆ.

ಬಿಜೆಪಿ ನಾಯಕನ ವಿರುದ್ಧ ದಾಖಲಾಗಿರುವ ದೂರನ್ನು ವಿಶೇಷ ಕಾರ್ಯನಿರ್ವಹಣಾ ದಳಕ್ಕೆ ಕಳುಹಿಸುವಂತೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಪವನ್‌ ಕುಮಾರ್ ಅವರು ಮಂಗಳವಾರ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದರು.

ಸಂಜೀವಿನಿ ಕ್ರೆಡಿಟ್‌ ಕೋ–ಆಪರೇಟಿವ್‌ ಸೊಸೈಟಿ ಹಗರಣಕ್ಕೆ ಸಂಬಂಧಿಸಿದ ದೂರಿನಲ್ಲಿ ಶೇಖಾವತ್‌‌‌, ಅವರ ಪತ್ನಿ ಮತ್ತು ಇತರರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಈ ಹಗರಣದಲ್ಲಿ ಸಾವಿರಾರು ಮಂದಿ ಠೇವಣಿದಾರರು ಸುಮಾರು ₹900 ಕೋಟಿ ಮೊತ್ತದಷ್ಟು ಹಣ ಕಳೆದುಕೊಂಡಿದ್ದರು.

ವಿಶೇಷ ಕಾರ್ಯನಿರ್ವಹಣಾ ದಳದ ಜೈಪುರ ಘಟಕ ಕಳೆದ ವರ್ಷ ಪ್ರಕರಣದ ತನಿಖೆ ಆರಂಭಿಸಿತ್ತು. 2019ರ ಆಗಸ್ಟ್‌ 23 ರಂದು ಎಫ್‌ಐಆರ್‌ ದಾಖಲಾಗಿತ್ತು. ಆದರೆ ನಿರ್ವಹಣಾ ದಳದ ದೋಷಾರೋಪ ಪಟ್ಟಿಯಲ್ಲಿ ಶೇಖಾವತ್‌ ಅವರ ಹೆಸರು ಉಲ್ಲೇಖವಾಗಿರಲಿಲ್ಲ. ಅವರ ಹೆಸರನ್ನು ಸೇರ್ಪಡೆ ಮಾಡುವಂತೆ ಸಲ್ಲಿಸಿದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ತಿರಸ್ಕರಿಸಿತ್ತು.

ಅರ್ಜಿದಾರರು ನಂತರ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ನಂತರ ಅರ್ಜಿಯ ವಿಚಾರಣೆ ನಡೆಸಬೇಕೆಂದು ನ್ಯಾಯಾಲಯವೂ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT