ಬುಧವಾರ, ಜೂನ್ 23, 2021
30 °C

ವಾಯು ಮಾಲಿನ್ಯ: ರೈಲ್ವೆಗೆ ₹ 91.2 ಲಕ್ಷ ದಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉತ್ತರ ಪ್ರದೇಶದ ಫೈಜಾಬಾದ್‌ ಜಿಲ್ಲೆಯಲ್ಲಿ ಸರಕು ಸಾಗಣೆ ಪ್ರಕ್ರಿಯೆ ವೇಳೆ ವಾಯುಮಾಲಿನ್ಯಕ್ಕೆ ಕಾರಣವಾದ ಆರೋಪಕ್ಕಾಗಿ ರೈಲ್ವೆ ಸಚಿವಾಲಯಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ₹91.2 ಲಕ್ಷ ದಂಡ ವಿಧಿಸಿದೆ.

ರೈಲ್ವೆ ಸೈಡಿಂಗ್‌ನಲ್ಲಿ ಸಿಮೆಂಟ್‌ನಂತಹ ಸರಕುಗಳನ್ನು ತುಂಬುವ ಮತ್ತು ಇಳಿಸುವ ಸಂದರ್ಭದಲ್ಲಿ ಪರಿಸರ ಮಾಲಿನ್ಯವಾಗಿದೆ ಎಂದು ಎನ್‌ಜಿಟಿ ತಿಳಿಸಿದೆ. ಎರಡು ತಿಂಗಳಲ್ಲಿ ಈ ಮೊತ್ತವನ್ನು ಠೇವಣಿ ಇಡಬೇಕು. ಇಲ್ಲದಿದ್ದಲ್ಲಿ ಕಠಿಣಕ್ರಮ ತೆಗೆದುಕೊಳ್ಳಬೇಕಾದಿತು ಎಂದು ಎನ್‌ಜಿಟಿ ಎಚ್ಚರಿಸಿದೆ.

ರೈಲ್ವೆಯ ಅಸಮರ್ಪಕ ಕ್ರಮದಿಂದಾಗಿ ವಾಯುಮಾಲಿನ್ಯ ಹೆಚ್ಚುತ್ತಿದೆ ಎಂದು ಉತ್ತರ ಪ್ರದೇಶ ನಿವಾಸಿ ಶಿವಾಂಶ್‌ ಪಾಂಡೆ ಎಂಬುವರು ಅರ್ಜಿ ಸಲ್ಲಿಸಿದ್ದರು. ‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಕುರಿತು ನೀಡಿರುವ ವರದಿಯನ್ನು ಆಧರಿಸಿ, ರೈಲ್ವೆ ಸಚಿವಾಲಯ ಮುಂದಿನ ಕ್ರಮ ತೆಗೆದುಕೊಳ್ಳಲಿ’ ಎಂದು ನ್ಯಾಯಮೂರ್ತಿ ಎ.ಕೆ. ಗೋಯೆಲ್‌ ನೇತೃತ್ವದ ಪೀಠ ತಿಳಿಸಿದೆ. 

ಸಿಮೆಂಟ್‌, ರಸಗೊಬ್ಬರ, ಧಾನ್ಯ ಮತ್ತು ಇತರೆ ಸರಕುಗಳನ್ನು ಲೋಡ್‌ ಮತ್ತು ಅನ್‌ಲೋಡ್‌ ಮಾಡುವಾಗ ವಾಯುಮಾಲಿನ್ಯವಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಉಸಿರಾಟದ ಸಮಸ್ಯೆ ಎದುರಾಗುತ್ತಿದೆ. ವಾಯುಮಾಲಿನ್ಯ ನಿಯಂತ್ರಣಕ್ಕೆ ರೈಲ್ವೆ ಇಲಾಖೆಯು ಕೈಗೊಂಡಿರುವ ಕ್ರಮ ತಾಂತ್ರಿಕವಾಗಿ ಸಮರ್ಪಕವಾಗಿಲ್ಲ. ಹಾಗಾಗಿ, ವಾಯುಮಾಲಿನ್ಯ ಹೆಚ್ಚುತ್ತಲೇ ಇದೆ’ ಎಂದು ಉತ್ತರಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿತ್ತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು