ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮ: ಭಯೋತ್ಪಾದಕರಿಗೆ ನೆರವು ನೀಡಿದ ಆರೋಪಿ ಬಂಧನ

Last Updated 7 ಜುಲೈ 2020, 15:07 IST
ಅಕ್ಷರ ಗಾತ್ರ

ಶ್ರೀನಗರ: ಪುಲ್ವಾಮ ದಾಳಿ ಸಂಬಂಧ ಭಯೋತ್ಪಾದಕರಿಗೆ ನೆರವು ನೀಡಿದ ಆರೋಪದ ಮೇಲೆ ಪುಲ್ವಾಮದ ನಿವಾಸಿಯನ್ನು ರಾಷ್ಟ್ರೀಯ ತನಿಖಾ ದಳವು ಮಂಗಳವಾರ ಬಂಧಿಸಿದೆ .

ಪುಲ್ವಾಮ ಜಿಲ್ಲೆಯ ಕಾಕ್ಪೋರ ನಿವಾಸಿ ಬಿಲಾಲ್‌ ಅಹಮದ್‌ ಕುಚೇ ಈ ಪ್ರಕರಣದಲ್ಲಿ ಬಂಧಿತನಾದ ಏಳನೇ ಆರೋಪಿ. ಮರದ ದಿಮ್ಮಿಯ ವ್ಯಾಪಾರ ನಡೆಸುತ್ತಿದ್ದ ಬಿಲಾಲ್‌ನನ್ನು ಜಮ್ಮುವಿನ ಕೋರ್ಟಿಗೆ ಹಾಜರುಪಡಿಸಲಾಯಿತು. ವಿಚಾರಣೆಗೆಂದು 10 ದಿನಗಳ ಕಾಲ ತನಿಖಾ ದಳದ ಸುಪರ್ದಿಗೆ ಒಪ್ಪಿಸಲಾಯಿತು.

ಭಯೋತ್ಪಾದಕರು ಆತನ ಮನೆಯನ್ನು ಅಡಗುತಾಣವಾಗಿ ಬಳಸಲು ಅನುವು ಮಾಡಿಕೊಟ್ಟಿದ್ದ. ಅಲ್ಲದೇ ಪಾಕಿಸ್ತಾನ ಮೂಲದ ಜೈಷ್‌–ಎ– ಮೊಹಮ್ಮದ್‌ ಸಂಘಟನೆಯೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಉನ್ನತ ತಂತ್ರಜ್ಞಾನದ ಮೊಬೈಲ್‌ಗಳನ್ನು ಪೂರೈಸಿದ್ದ ಎಂದು ತನಿಖಾ ದಳವು ತಿಳಿಸಿದೆ.

ಆತ್ಮಾಹುತಿ ದಾಳಿ ನಡೆಸಿದ್ದ ಅದಿಲ್‌ ಅಹಮದ್‌ ದಾರ್‌ಈ ಮೊಬೈಲ್‌ ಬಳಸಿಯೇ ವಿಡಿಯೊ ರೆಕಾರ್ಡ್‌ ಮಾಡಿದ್ದ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT