ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶ ನೀತಿ, ಮಸೂದೆ ಅಂತಿಮ ಹಂತದಲ್ಲಿ: ಕೆ.ಶಿವನ್‌

Last Updated 5 ಜುಲೈ 2020, 16:08 IST
ಅಕ್ಷರ ಗಾತ್ರ

ನವದೆಹಲಿ: ಬಾಹ್ಯಾಕಾಶ ನೀತಿ ಹಾಗೂ ಬಾಹ್ಯಾಕಾಶ ಚಟುವಟಿಕೆ ಮಸೂದೆಯ ತಯಾರಿ ಅಂತಿಮ ಹಂತದಲ್ಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಅಧ್ಯಕ್ಷ ಕೆ.ಶಿವನ್‌ ಹೇಳಿದರು.

ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಚಟುವಟಿಕೆಗಳಲ್ಲಿ ಖಾಸಗಿ ಕಂಪನಿಗಳು ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಒಪ್ಪಿಗೆ ನೀಡಿತ್ತು. ಈ ಮೂಲಕ ರಾಕೆಟ್‌ ನಿರ್ಮಾಣ, ಉಪಗ್ರಹ ಅಭಿವೃದ್ಧಿ ಮುಂತಾದ ಬಾಹ್ಯಾಕಾಶ ಚಟುವಟಿಕೆಗಳಲ್ಲಿಖಾಸಗಿ ಕಂಪನಿಗಳೂ ಭಾಗವಹಿಸಬಹುದಾಗಿದೆ. ‘ಶೀಘ್ರದಲ್ಲೇ ಯಾವುದೇ ಅಡೆತಡೆಗಳು ಇಲ್ಲದೇ ಖಾಸಗಿ ಕಂಪನಿಗಳೂ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒಪ್ಪಿಗೆ ನೀಡುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದು. ಬಾಹ್ಯಾಕಾಶ ನೀತಿ ಹಾಗೂ ಮಸೂದೆಯು ಈ ಕ್ಷೇತ್ರದ ಕಾನೂನಿನ ಅಡೆತಡೆಗಳಿಗೆ ಪರಿಹಾರ ನೀಡಲಿದೆ’ ಎಂದು ಶಿವನ್‌ ತಿಳಿಸಿದರು.

ಸರ್ಕಾರವು ಬಾಹ್ಯಾಕಾಶ ಕಾನೂನು ತರಲು ಸಿದ್ಧತೆ ನಡೆಸುತ್ತಿದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಾಹ್ಯಾಕಾಶ ಸಚಿವಾಲಯದ ಕಾರ್ಯದರ್ಶಿಯೂ ಆಗಿರುವ ಶಿವನ್‌, ‘ಖಂಡಿತವಾಗಿಯೂ, ಇದನ್ನು ಮಾಡುವ ಅವಶ್ಯಕತೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT