ಸೋಮವಾರ, ಜೂನ್ 14, 2021
23 °C

ಗ್ರೀನ್‌ ಕಾರ್ಡ್‌ ಹೂಡಿಕೆ ಅಕ್ರಮ: ಭಾರತೀಯನಿಗೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌ (ಪಿಟಿಐ): ಗ್ರೀನ್‌ ಕಾರ್ಡ್‌ ಹೂಡಿಕೆ ಅಕ್ರಮವೊಂದರಲ್ಲಿ ಭಾಗಿಯಾಗಿರುವ ಭಾರತ ಮೂಲದ ವ್ಯಕ್ತಿ ಹಾಗೂ ಎರಡು ಕಂಪೆನಿಗಳು ₨೮೮ ಕೋಟಿ (1.4 ಕೋಟಿ ಅಮೆರಿಕನ್‌ ಡಾಲರ್‌) ದಂಡವನ್ನು ಅಮೆರಿಕದ ಮಾರುಕಟ್ಟೆಗಳ ನಿಯಂತ್ರಕ ಸಂಸ್ಥೆಗೆ (ಎಸ್‌ಇಸಿ) ಪಾವತಿ ಮಾಡ ಬೇಕಾಗಿ ಬಂದಿದೆ.ಭಾರತ ಮೂಲದ  ಅನ್ಶೂ ಸೇಥಿ ಹಾಗೂ ಎರಡು ಕಂಪೆನಿಗಳು ಅಮೆರಿಕ ದಲ್ಲಿ ವಾಸ ಮಾಡುವ ಅವಕಾಶ ನೀಡಲು ಗ್ರೀನ್‌ ಕಾರ್ಡ್‌ ನೀಡಲಾ ಗು ವುದು ಎಂದು ನೂರಾರು ವಿದೇಶಿಯ ಹೂಡಿಕೆದಾರರಿಂದ ₨೯೪೫ ಕೋಟಿ (15.8 ಕೋಟಿ ಅಮೆರಿಕನ್‌ ಡಾಲರ್‌) ಸಂಗ್ರಹಿಸಿದ್ದವು.ಸೇಥಿ ಅವರು ಷಿಕಾಗೊ ಕನ್‌ವೆನ್ಶನ್ ಸೆಂಟರ್‌ ಮತ್ತು ಇಂಟರ್‌ ಕಾಂಟಿ ನೆಂಟಲ್‌ ರೀಜನಲ್‌ ಸೆಂಟರ್‌ ಟ್ರಸ್ಟ್‌ ಆಫ್‌ ಷಿಕಾಗೊ ಮೂಲಕ ಸುಮಾರು ₨೯೪೫ ನ್ನು 300 ಹೂಡಿಕೆ ದಾರರಿಂದ ಪಡೆದಿದ್ದರು.ಫೆಡರಲ್ ವೀಸಾ ಕಾರ್ಯಕ್ರಮದ ಮೂಲಕ ವಾಸ್ತವ್ಯ ಅನುಮತಿ ಪಡೆದು ಅಮೆರಿಕದಲ್ಲಿ ಹೂಡಿಕೆ ಮಾಡಿ ಕೊಡುವ ಉದ್ದೇಶದಿಂದ ವಿದೇಶಿಯ ರಿಂದ ಇಷ್ಟು ಹಣ ಪಡೆಯಲಾಗಿತ್ತು.ಈ ಅಕ್ರಮದ ಬಗ್ಗೆ ವಿಚಾರಣೆ ನಡೆಸಿದ ಅಮೆರಿಕದ ಜಿಲ್ಲಾ ನ್ಯಾಯಾಲಯ ಸೇಥಿ ಹಾಗೂ ಇತರ ಎರಡು ಕಂಪೆನಿಗಳು ಅಕ್ರಮ ನಡೆಸಿವೆ ಎಂದು ಹೇಳಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.