ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚೆ ಉಟ್ಟ ಅಭಿಜಿತ್, ಸೀರೆಯಲ್ಲಿ ಎಸ್ತರ್: ಭಾರತೀಯ ಉಡುಗೆಯಲ್ಲಿ ನೊಬೆಲ್ ಸ್ವೀಕಾರ

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ  
Last Updated 12 ಡಿಸೆಂಬರ್ 2019, 7:24 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್‌: ಭಾರತ ಮೂಲದ ಅಭಿಜಿತ್‌ ಬ್ಯಾನರ್ಜಿ, ಅವರ ಪತ್ನಿ ಎಸ್ತರ್‌ ಡಫ್ಲೊ ಸ್ವೀಡನ್‌ನಲ್ಲಿ ನಡೆದ ನೊಬೆಲ್‌ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ಭಾರತೀಯ ಸಾಂಪ್ರದಾಯಿಕ ಶೈಲಿಯ ಉಡುಪು ಧರಿಸಿಗಮನ ಸೆಳೆದಿದ್ದಾರೆ. ಸಮಾರಂಭದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಭಾರಿಮೆಚ್ಚುಗೆ ವ್ಯಕ್ತವಾಗಿದೆ.

58 ವರ್ಷದ ಬ್ಯಾನರ್ಜಿ ಅವರು ಪೈಜಾಮ ಅದರ ಮೇಲೊಂದು ಧೋತಿ ವಿನ್ಯಾಸದ ಕೋಟು ಧರಿಸಿ ಪಂಜಾಬಿ ದಿರಿಸಿನಲ್ಲಿ ಕಾಣಿಸಿಕೊಂಡರೆ, ಅವರ ಪತ್ನಿ 46 ವರ್ಷದ ಡಫ್ಲೊ ಎಸ್ತರ್ ಅವರು ನೀಲಿ ಹಾಗೂ ಹಸಿರು ಬಣ್ಣದ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು.

ಅಭಿಜಿತ್‌ ಬ್ಯಾನರ್ಜಿ, ಎಸ್ತರ್‌ ಡಫ್ಲೊ ಮತ್ತು ಹಾರ್ವರ್ಡ್‌ನ ಪ್ರಾಧ್ಯಾಪಕ ಮೈಖೆಲ್‌ ಕ್ರೆಮರ್‌ ಅವರು ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.ನೊಬಲ್‌ ಪ್ರಶಸ್ತಿಯು 90 ಲಕ್ಷ ಸ್ವೀಡಿಶ್ ಕ್ರೊನಾರ್‌ (ಸುಮಾರು ₹ 6.5 ಕೋಟಿ) ನಗದನ್ನು ಒಳಗೊಂಡಿದೆ.

ಜಾಗತಿಕ ಮಟ್ಟದಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು ಇವರು ತೋರಿಸಿಕೊಟ್ಟ ಪ್ರಾಯೋಗಿಕ ಧೋರಣೆಗಾಗಿ ಪ್ರಶಸ್ತಿಯ ಗೌರವ ಸಂದಿದೆ.

ಬ್ಯಾನರ್ಜಿ ಹಾಗೂ ಡಫ್ಲೊ ಧರಿಸಿದ್ದ ಉಡುಪಿನ ಬಗ್ಗೆ ಡಾ. ಅರವಿಂದ್‌ ವರ್ಮಾನಿ ಪ್ರತಿಕ್ರಿಯಿಸಿದ್ದು, ‘ಧೋತಿ ಮತ್ತು ಸೀರೆ ಹೆಚ್ಚು ಪ್ರಭಾವಶಾಲಿಯಾಗಿದೆ’ ಎಂದು ಹೇಳಿದ್ದಾರೆ.

‘ನೋಬಲ್‌ ಪ್ರಶಸ್ತಿ ವಿಜೇತರಾದ ಪ್ರೊಫೆಸರ್ ಅಭಿಜಿತ್‌ ಬ್ಯಾನರ್ಜಿ, ಎಸ್ತರ್‌ ಡಫ್ಲೊ ದಂಪತಿಯನ್ನು ಭಾರತೀಯ ಸಾಂಪ್ರದಾಯಿಕ ಉಡುಪಿನಲ್ಲಿ ಕಂಡು ಹೃದಯಸ್ಪರ್ಶಿಸಿತ್ತು. ಈ ವಿಶೇಷ ದಿನ ಹಲವರಿಗೆ ಸ್ಪೂರ್ತಿದಾಯಕ ಎಂದು ಅಗ್ರಿಮಾ ಮಿಯಾನ್‌ ಎಂಬುವರು ಹೇಳಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಧೋತಿ ಮತ್ತು ಸೀರೆಯಲ್ಲಿ ಕಾಣಿಸಿಕೊಂಡ ಅಭಿಜಿತ್‌ ಬ್ಯಾನರ್ಜಿ, ಎಸ್ತರ್‌ ಡಫ್ಲೊ ಭಾರತಕ್ಕೆ ಗೌರವ ತಂದಿದ್ದಾರೆ ಎಂದು ಕಸ್ತೂರಿ ಟ್ವೀಟ್‌ ಮಾಡಿದ್ದಾರೆ.

ಬ್ಯಾನರ್ಜಿ ಮತ್ತು ಡಫ್ಲೊ ಅವರಿಬ್ಬರೂ ಅಮೆರಿಕದ ಮೆಸ್ಸಾಚುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ (ಎಂಐಟಿ) ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಡಫ್ಲೊ ಅವರು ಅರ್ಥಶಾಸ್ತ್ರದಲ್ಲಿ ಈ ಪ್ರಶಸ್ತಿ ಪಡೆದ ಎರಡನೇ ಮಹಿಳೆ. ಅಷ್ಟೇ ಅಲ್ಲ, ಈ ‍ಕ್ಷೇತ್ರದಲ್ಲಿ ಈ ಪ‍್ರಶಸ್ತಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ಎನಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT