ಸೋಮವಾರ, ನವೆಂಬರ್ 18, 2019
22 °C

ಪ್ರತ್ಯೇಕ ಅಫಘಾತ: ಭಾರತದ ಇಬ್ಬರ ಸಾವು

Published:
Updated:

ದುಬೈ: ಎರಡು ಪ್ರತ್ಯೇಕ ಅಪಘಾತದಲ್ಲಿ ಭಾರತ ಮೂಲದ ಮಹಿಳೆ ಮತ್ತು ನಾಲ್ಕು ವರ್ಷದ ಬಾಲಕಿ ಮೃತಪಟ್ಟಿದ್ದಾರೆ ಎಂದು ಖಲೀಜ್‌ ಟೈಮ್ಸ್ ಬುಧವಾರ ವರದಿ ಮಾಡಿದೆ.

ಮಹಿಳೆ ಉತ್ತರ ಪ್ರದೇಶ ಮೂಲದವರಾಗಿದ್ದಾರೆ. ಇವರ 17 ವರ್ಷ ವಯಸ್ಸಿನ ಮಗನೇ ಕಾರು ಅಪಘಾತ ಮಾಡಿದ್ದು, ಈತ ವಾಹನ ಚಾಲನಾ ಪರವಾನಗಿ ಹೊಂದಿರಲಿಲ್ಲ. ಶಾರ್ಜಾದ ಮುವೀಲಾ ಪ್ರದೇಶದ ಉದ್ಯಾನಕ್ಕೆ ಬಂದಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಾರನ್ನು ಪಾರ್ಕಿಂಗ್‌ ಮಾಡುವ ವೇಳೆ ಬ್ರೇಕ್‌ ಹಾಕುವ ಬದಲು ಆ‍್ಯಕ್ಸಲರೇಟರ್‌ ಮೇಲೆ ಕಾಲಿರಿಸಿದ್ದರಿಂದ ತಾಯಿಗೆ ಕಾರು ಡಿಕ್ಕಿ ಹೊಡೆದಿದೆ.

ಇದೇ ಮಾದರಿಯ ಮತ್ತೊಂದು ಅಪಘಾತ ಜೆಬೆಲ್‌ ಆಲಿ ಪ್ರದೇಶದಲ್ಲಿ ನಡೆದಿದೆ. ಬಾಲಕಿ (4) ಮೃತಪಟ್ಟು, ತಾಯಿ ಗಾಯಗೊಂಡಿದ್ದಾರೆ. ಅಪಘಾತ ನಡೆಸಿದವನನ್ನು ಆಫ್ರಿಕಾ ಮೂಲದವ ಎಂದು ಗುರುತಿಸಲಾಗಿದೆ. ‌ 

 

 

ಪ್ರತಿಕ್ರಿಯಿಸಿ (+)