ಭಾನುವಾರ, ಜನವರಿ 19, 2020
20 °C

ಕ್ಯೂಬಾ: 40 ವರ್ಷಗಳ ನಂತರ ಪ್ರಧಾನಿ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹವಾನಾ (ಎಎಫ್‌ಪಿ): 40 ವರ್ಷಗಳ ನಂತರ ಕ್ಯೂಬಾದ ಪ್ರಧಾನಿ ಹುದ್ದೆ ಅಸ್ತಿತ್ವಕ್ಕೆ ಬಂದಿದ್ದು, ಮೊದಲ ಪ್ರಧಾನಿಯಾಗಿ ಮ್ಯಾನುಯೆಲ್‌ ಮರ‍್ರೆರೊ ಅಧಿಕಾರ ವಹಿಸಿಕೊಂಡಿದ್ದಾರೆ. 

ಫಿಡೆಲ್‌ ಕ್ಯಾಸ್ಟ್ರೊ ಅವರು 40 ವರ್ಷಗಳ ಹಿಂದೆ ಪ್ರಧಾನಿ ಆಗಿದ್ದರು. ನಂತರ ಈ ಹುದ್ದೆಯನ್ನು ತೆಗೆದು ಹಾಕಲಾಗಿತ್ತು. ದೀರ್ಘಕಾಲದಿಂದ ಪ್ರವಾಸೋದ್ಯಮ ಸಚಿವರಾಗಿರುವ ಮ್ಯಾನುಯೆಲ್‌ ಅವರು ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ಪ್ರಧಾನಿ ನೇಮಕವು ಕಮ್ಯುನಿಸ್ಟ್‌ ಪಕ್ಷದ ಆಡಳಿತವನ್ನು ವಿಸ್ತರಿಸಲು ಅಧಿಕಾರದ ವಿಕೇಂದ್ರೀಕರಣ ಮತ್ತು ಬದಲಾವಣೆ ಪ್ರಕ್ರಿಯೆಯ ಒಂದು ಭಾಗ ಆಗಿದೆ. 

‘ಈ ಪ್ರಸ್ತಾವವನ್ನು ಕ್ಯೂಬಾದ ಕಮ್ಯುನಿಸ್ಟ್‌ ಪಕ್ಷದ ರಾಜಕೀಯ ಬ್ಯೂರೋ ಅಂಗೀಕರಿಸಿದೆ’ ಎಂದು ಅಧ್ಯಕ್ಷ ಮಿಗೆಲ್‌ ಡಯಾಜ್‌– ಕ್ಯಾನೆಲ್‌ ರಾಷ್ಟ್ರದ ಸಂಸತ್‌ಗೆ ಶನಿವಾರ ಮಂಡಿಸಿದರು. ಇದಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು