ನ್ಯೂಯಾರ್ಕ್: 'ಅಮೆರಿಕದಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ತಲುಪಿಸಲು ಏರ್‌ಇಂಡಿಯಾದ 7 ವಿಮಾನಗಳು ಸಿದ್ಧವಾಗಿವೆ. ಇವುಗಳಲ್ಲಿ 2 ವಿಮಾನಗಳು ಸ್ಯಾನ್‌ಫ್ರಾನ್ಸಿಸ್ಕೊ ಹಾಗೂ ನ್ಯೂಜೆರ್ಸಿಯಿಂದ ಭಾರತಕ್ಕೆ ಹೊರಟಿವೆʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ʼಮೊದಲ ವಿಮಾನ ಸ್ಯಾನ್‌ಫ್ರಾನ್ಸಿಸ್ಕೊದಿಂದ ಶನಿವಾರ ಹೊರಟಿದ್ದು, ಮುಂಬೈ ಹಾಗೂ ಅಹಮದಾಬಾದ್‌ಗೆ ಜನರನ್ನು ತಲುಪಿಸಲಿದೆ. ಎರಡನೇ ವಿಮಾನ ನ್ಯೂಜೆರ್ಸಿಯಿಂದ ಭಾನುವಾರ ಹೊರಟಿದ್ದು, ಮುಂಬೈ ಹಾಗೂ ಅಹಮದಾಬಾದ್‌ಗೆ ಜನರನ್ನು ತಲುಪಿಸಲಿದೆ. ಉಳಿದ ಐದು ವಿಮಾನಗಳು ಇನ್ನೂ ಅಮೆರಿಕದಲ್ಲಿಯೇ ಸಿಲುಕಿವೆʼ ಎಂದು ಅವರು ಹೇಳಿದ್ದಾರೆ.

ʼವಿಮಾನ ಹತ್ತುವ ಮೊದಲು ಎಲ್ಲಾ ಪ್ರಯಾಣಿಕರಿಗೂ ಆರೋಗ್ಯ ತಪಾಸಣೆ ಕಡ್ಡಾಯವಾಗಿದ್ದು, ಕೊರೊನಾ ಸೋಂಕಿನ ಲಕ್ಷಣಗಳಿಲ್ಲದೆ ಇರುವವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ, ಭಾರತಕ್ಕೆ ಬಂದಿಳಿದ ಬಳಿಕ 14 ದಿನ ಕ್ವಾರಂಟೈನ್‌ನಲ್ಲಿರುವುದು ಕಡ್ಡಾಯ. ಎಲ್ಲರೂ ಆರೋಗ್ಯ ಸೇತು ಆಪ್ ಡೌನ್‌ಲೋಡ್ ಮಾಡಿ ನೋಂದಣಿ ಮಾಡಿಕೊಳ್ಳಬೇಕುʼ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.