ಶುಕ್ರವಾರ, ಫೆಬ್ರವರಿ 28, 2020
19 °C

ಅಲ್ ಕೈದಾ ಸಕ್ರಿಯವಾಗಿದೆ: ವಿಶ್ವಸಂಸ್ಥೆ ವರದಿ ಉಲ್ಲೇಖ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ‘ಅಲ್ ಕೈದಾ ಉಗ್ರ ಸಂಘಟನೆ ಸಕ್ರಿಯವಾಗಿದ್ದು, ಪಾಕಿಸ್ತಾನ ಮೂಲದ ಲಷ್ಕರ್‌–ಎ–ತಯಬಾ (ಎಲ್‌ಇಟಿ), ಹಖ್ಖಾನಿ ಜಾಲದ ಜತೆ ನಿಕಟ ಸಂಪರ್ಕ ಹೊಂದಿದೆ. ಆದರೆ ಅಲ್‌ ಕೈದಾ ನಾಯಕ ಮೊಹಮ್ಮದ್ ಅಲ್ ಜವಾಹಿರಿಯ ಆರೋಗ್ಯ ಮತ್ತು ಮುಂದಿನ ನಾಯಕತ್ವ ಕುರಿತು ಹಲವು ಅನುಮಾನಗಳಿವೆ’ ಎಂದು ವರದಿಯೊಂದು ಹೇಳಿದೆ.

ಅಲ್‌ ಕೈದಾಗೆ ಆರ್ಥಿಕ ನೆರವು ನಿರ್ಬಂಧ ಹೇರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಮಿತಿಗೆ, ವಿಶ್ಲೇಷಣಾತ್ಮಕ ನೆರವು ಮತ್ತು ಆರ್ಥಿಕ ನಿರ್ಬಂಧ ತಂಡ ಸಲ್ಲಿಸಿರುವ ವರದಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ.

‘ತಾಲಿಬಾನ್ ಜತೆಗೆ ದೀರ್ಘಾವಧಿ ಮತ್ತು ಗಾಢವಾದ ಸಂಬಂಧ ಹೊಂದಿರುವುದರಿಂದ, ಅಫ್ಗಾನಿಸ್ತಾನವನ್ನು ಅಲ್ ಕೈದಾ ತನ್ನ ಸುರಕ್ಷಿತ ನೆಲೆ ಎಂದು ಪರಿಗಣಿಸುತ್ತದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಇಸ್ಲಾಮಿಕ್ ಸ್ಟೇಟ್, ಅಲ್ ಕೈದಾ ಹಾಗೂ ಇದರ ಸಹ ಸಂಘಟನೆಗಳು, ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ವ್ಯಕ್ತಿಗಳ ಕುರಿತು ಪ್ರತಿ ಆರು ತಿಂಗಳಿಗೊಮ್ಮೆ ಈ ತಂಡ ಪ್ರತ್ಯೇಕ ವರದಿಗಳನ್ನು ಸಲ್ಲಿಸುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು