ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ: ಕಾಳ್ಗಿಚ್ಚಿನ ಹತೋಟಿಗೆ ಅಗ್ನಿಶಾಮಕ ಸಿಬ್ಬಂದಿ ಹೋರಾಟ

Last Updated 7 ಜನವರಿ 2020, 18:15 IST
ಅಕ್ಷರ ಗಾತ್ರ

ಸಿಡ್ನಿ: ವಾರದ ಕೊನೆಯಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಕಾಳ್ಗಿಚ್ಚನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಮಂಗಳವಾರವೂ ಹೋರಾಟ ನಡೆಸಿದರು. ಉಷ್ಣಾಂಶದಲ್ಲಿ ಅಲ್ಪ ಇಳಿಕೆ ಆಗಿರುವುದು ಸಿಬ್ಬಂದಿಗೆ ವರವಾಗಿದ್ದು, ಮಳೆ ಬಿದ್ದರೆ ಕಾಳ್ಗಿಚ್ಚು ಹತೋಟಿಗೆ ಬರುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರದ ವೇಳೆಗೆ ಉಷ್ಣಾಂಶದಲ್ಲಿ ಏರಿಕೆ ಆಗಲಿದ್ದು, ಈ ನಡುವೆ ಕಾಳ್ಗಿಚ್ಚನ್ನು ಹತೋಟಿಗೆ ತರಲು ನಾಗರಿಕರು, ಸ್ವಯಂಸೇವಕರು ರಕ್ಷಣಾ ಸಿಬ್ಬಂದಿಯೊಂದಿಗೆ ಕೈಜೋಡಿಸಿದ್ದಾರೆ. ಹೆಚ್ಚಿನ ಹಾನಿಯನ್ನು ತಪ್ಪಿಸಲು ಒಗ್ಗಟ್ಟಿನಿಂದ ಕಾರ್ಯಾಚರಣೆ ನಡೆಸುತ್ತಿರುವುದಾಗಿ ನ್ಯೂಸೌತ್‌ ವೇಲ್ಸ್‌ನ ಗ್ರಾಮೀಣ ಅಗ್ನಿಶಾಮಕ ಸೇವೆಯ ಕಮಿಷನರ್‌ ಶೇನ್‌ ಫಿಟ್ಜ್‌ಸೈಮನ್ಸ್ ತಿಳಿಸಿದ್ದಾರೆ.

ವಾರದ ಆರಂಭದಲ್ಲಿ ಸಾಧಾರಣ ಮಳೆ ಆಗಿದ್ದರೂ, ದೇಶದ ಪೂರ್ವ ಭಾಗದ 12ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಬೆಂಕಿ ನಿಯಂತ್ರಣಕ್ಕೆ ಬಾರದ ಸ್ಥಿತಿಯಲ್ಲಿದೆ. ನ್ಯೂಸೌತ್‌ವೇಲ್ಸ್ ಮತ್ತು ವಿಕ್ಟೋರಿಯಾ ರಾಜ್ಯಗಳ ಕಾಡುಗಳಲ್ಲಿ ಬೆಂಕಿಯ ಜ್ವಾಲೆ ಮುಂದುವರಿದೆ ಎಂದು ಅವರು ಹೇಳಿದ್ದಾರೆ.

ಚಿಲಿ, ಅರ್ಜೆಂಟೀನಾಕ್ಕೂ ವ್ಯಾಪಿಸಿದ ಹೊಗೆ: 12,000 ಕಿ.ಮೀ ದೂರದಲ್ಲಿರುವ ದಕ್ಷಿಣ ಅಮೆರಿಕ ಖಂಡದ ಚಿಲಿ, ಅರ್ಜೆಂಟೀನಾ ದೇಶಗಳಿಗೂ ಕಾಳ್ಗಿಚ್ಚಿನ ಹೊಗೆಯು ವ್ಯಾಪಿಸಿದೆ. ಈ ಕುರಿತು ಎರಡೂ ದೇಶಗಳ ಹವಮಾನ ಇಲಾಖೆಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT