7

ಅವಶೇಷದಡಿ 9 ಗಂಟೆ ಸಿಲುಕಿದ್ದ ಮಗುವಿನ ರಕ್ಷಣೆ

Published:
Updated:
montana baby rescue

ಮಿಸ್ಸೌಲಾ, ಮೊಂಟಾನ, (ಅಮೆರಿಕ): ಮರ ಹಾಗೂ ಕಟ್ಟಿಗೆಗಳ ಅವಶೇಷಗಳಡಿ ಸಮಾಧಿ ಮಾಡಲಾಗಿದ್ದ ಐದು ತಿಂಗಳು ಗಂಡುಮಗುವನ್ನು ರಕ್ಷಿಸಲಾಗಿದೆ. 9 ಗಂಟೆಗಳ ಕಾಲ ಬದುಕಿದ್ದ ಈ ಅಚ್ಚರಿಯ ಘಟನೆ ಅಮೆರಿಕದ ಮೊಂಟನದ ಮಿಸ್ಸೌಲಾ ಅರಣ್ಯದಲ್ಲಿ ನಡೆದಿದೆ.  

ರಕ್ಷಣೆ ಮಾಡಲಾದ ಮಗುವಿಗೆ ಒಂದಿಷ್ಟು ತರಚಿದ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶನಿವಾರ 8 ಗಂಟೆ ವೇಳೆಗೆ ಫ್ರಾನ್ಸಿಸ್ ಕ್ರೌಲೆ ಎಂಬಾತ ಜನರಿಗೆ ಧಮಕಿ ಹಾಕುತ್ತಿದ್ದಾನೆ ಎಂಬ ದೂರಿನ ಕಾರಣ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಮಗುವನ್ನು ಕಾಡಿನೊಳಗೆ ಸಮಾಧಿ ಮಾಡಿದ ಸತ್ಯವನ್ನು ಆತ ಹೊರಹಾಕಿದ್ದ. ಸತತ ಆರು ಗಂಟೆ ಹುಡುಕಾಡಿದ ಬಳಿಕ ಕಾಡಿನಲ್ಲಿ ಮಗುವಿನ ಅಳು ಕೇಳಿಸಿತು. ಕಟ್ಟಿಗೆ ರಾಶಿಯಲ್ಲಿ ಮುಖ ಕೆಳಗೆ ಮಾಡಿರುವ ಸ್ಥಿತಿಯಲ್ಲಿದ್ದ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಯಿತು.

ಆರೋಪಿ ಒರಿಗಾನ್‌ನ ಪೋರ್ಟ್‌ಲ್ಯಾಂಡ್ ನಿವಾಸಿ ಕ್ರೌಲೆಯು ಜೂನ್‌ನಲ್ಲಿ ಬಂಧನಕ್ಕೆ ಒಳಗಾಗಿ, ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಮಗುವಿನ ಜೊತೆ ಈತನ ಸಂಬಂಧ ಏನೆಂಬುದು ಸದ್ಯ ಗೊತ್ತಾಗಿಲ್ಲ. 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !