ಇಬ್ಬರ ಸಾವು: ಏಳನೆ ದಿನವೂ ಢಾಕಾದ ರಸ್ತೆಗಳನ್ನು ಬಂದ್‌ ಮಾಡಿದ ವಿದ್ಯಾರ್ಥಿಗಳು

7

ಇಬ್ಬರ ಸಾವು: ಏಳನೆ ದಿನವೂ ಢಾಕಾದ ರಸ್ತೆಗಳನ್ನು ಬಂದ್‌ ಮಾಡಿದ ವಿದ್ಯಾರ್ಥಿಗಳು

Published:
Updated:
Deccan Herald

ಢಾಕಾ,ಬಾಂಗ್ಲಾದೇಶ: ರಸ್ತೆ ಸುರಕ್ಷೆ ಸುಧಾರಣೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಇಲ್ಲಿ ನಡೆಸುತ್ತಿರುವ ರಸ್ತೆ ತಡೆ ಪ್ರತಿಭಟನೆಯು ಏಳನೇ ದಿನಕ್ಕೆ ಕಾಲಿರಿಸಿದ್ದು, ಶನಿವಾರವೂ ವಾಹನ ಸಂಚಾರ ಸ್ಥಗಿತಗೊಂಡಿದೆ.

ಶಾಲಾ ಸಮವಸ್ತ್ರ ಧರಿಸಿದ್ದ ಸಾವಿರಾರು ವಿದ್ಯಾರ್ಥಿಗಳು ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಕಳೆದ ವಾರ ಬಸ್‌ ಡಿಕ್ಕಿ ಹೊಡೆದು ಒಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಇಲ್ಲಿ ಮೃತಪಟ್ಟಿದ್ದರು, ಅನಂತರ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು.

ಪ್ರತಿಭಟನೆ ಕೈಬಿಡುವಂತೆ ಅಧಿಕಾರಿಗಳು ಮನವಿ ಮಾಡಿದರೂ, ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೂ ಬಾಂಗ್ಲಾದೇಶದ ಸಾರಿಗೆ ಇಲಾಖೆಯ ಬಗ್ಗೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !