ಶುಕ್ರವಾರ, ಏಪ್ರಿಲ್ 10, 2020
19 °C

ಅರಮನೆ ತೊರೆದ ಹ್ಯಾರಿ ದಂಪತಿ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ಬ್ರಿಟನ್‌ ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನ್‌ ಮರ್ಕೆಲ್‌ ಅವರು ರಾಜಮನೆತನದ ಹೊಣೆಗಾರಿಕೆಗಳಿಂದ ಹೊರಬಂದಿದ್ದಾರೆ.

ಈ ಸಂಬಂಧ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದು, ಕೆಲ ದಿನಗಳಲ್ಲಿಯೇ ರಾಜಮನೆತನದ ಗೌರವಗಳೂ ಕೊನೆಯಾಗಲಿವೆ. ಅಲ್ಲದೆ ಇನ್ನು ಮುಂದೆ ಅವರ ಕೆಲಸಗಳಿಗೆ ಸಾರ್ವಜನಿಕ ಹಣವನ್ನು ಬಳಸುವುದಿಲ್ಲ ಎಂದು ಬಂಕಿಂಗ್ ಹ್ಯಾಮ್ ಅರಮನೆ ಪ್ರಕಟಿಸಿದೆ.

ತಿಂಗಳುಗಳ ಚರ್ಚೆ ನಂತರ ಈ ಒಪ್ಪಂದಕ್ಕೆ ಬರಲಾಗಿದೆ. ಇದು ಮೊಮ್ಮಗ ಮತ್ತು ಆತನ ಕುಟುಂಬಕ್ಕೆ ನೀಡುವ ರಚನಾತ್ಮಕ ಬೆಂಬಲವಾಗಿದೆ ಎಂದು ರಾಣಿ ಎಲಿಜಬೆತ್‌–2 ಹೇಳಿದ್ದಾರೆ.

‘ಹ್ಯಾರಿ, ಮೇಘನ್ ಮತ್ತು ಆರ್ಚಿ ಯಾವಾಗಲೂ ನನ್ನ ಕುಟುಂಬದ ಪ್ರೀತಿಪಾತ್ರ ಸದಸ್ಯರು’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹತ್ತು ದಿನಗಳ ಹಿಂದಷ್ಟೇ ಹ್ಯಾರಿ ದಂಪತಿ ಅರಮನೆಯ ಐಷಾರಾಮಿ ಜೀವನ ತೊರೆವುದಾಗಿ ಘೋಷಿಸಿದ್ದರು. ಗೌರವಪೂರ್ವಕ ರಾಜ-ರಾಣಿ ಪದವಿ ಬೇಡ ಎಂದೂ ಹೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು