ಗುರುವಾರ , ಏಪ್ರಿಲ್ 9, 2020
19 °C

ಕೊರೊನಾ ವೈರಸ್‌ ಸೋಂಕಿಗೆ ಮೊದಲಿಬ್ಬರ ಬಲಿ: ತಲ್ಲಣಿಸಿದ ಸಿಂಗಾಪುರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗಾಪುರ: ಕೊರೊನಾ ವೈರಸ್‌ ಸೋಂಕಿಗೆ ಸಿಂಗಾಪುರದಲ್ಲಿ ಶನಿವಾರ ಇಬ್ಬರು ಬಲಿಯಾಗಿದ್ದಾರೆ. 

ಸಿಂಗಾಪುರದಲ್ಲಿ ಪತ್ತೆಯಾಗಿರುವ 385 ಕೊರಾನಾ ಸೋಂಕು ಪ್ರಕರಣಗಳಲ್ಲಿ ಒಟ್ಟು 131 ವ್ಯಕ್ತಿಗಳು ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಇನ್ನು ಆಸ್ಪತ್ರೆಯಲ್ಲಿರುವ 254 ಸೋಂಕು ಪೀಡಿತ ವ್ಯಕ್ತಿಗಳಲ್ಲಿ ಹೆಚ್ಚಿನವರು ಸ್ಥಿರವಾಗಿದ್ದಾರೆ. ಆದರೆ, ಶನಿವಾರ 75 ವರ್ಷದ ವೃದ್ದೆ ಮತ್ತು 64 ವರ್ಷದ ವೃದ್ದರೊಬ್ಬರು ಸೋಂಕಿಗೆ ಬಲಿಯಾಗಿದ್ದು, ಸಿಂಗಾಪುರವನ್ನು ತಲ್ಲಣಿಸುವಂತೆ ಮಾಡಿದೆ. 

ಜಗತ್ತಿನಾದ್ಯಂತ ಕೊರೊನಾ ಸೋಂಕು ಪೀಡಿತರ ಸಂಖ್ಯೆ 276,472ಕ್ಕೆ ಏರಿದ್ದು, ಒಟ್ಟು 11,417 ಸಾವಿರ ಮಂದಿ ಬಲಿಯಾಗಿದ್ದಾರೆ. 91,954 ಜನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು