ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಯುಎಇಯಲ್ಲಿ ಭಾರತೀಯರಿಗೆ ಪರ್ಯಾಯ ವಸತಿ, ರಾಯಭಾರ ಕಚೇರಿ ವ್ಯವಸ್ಥೆ

ನೆರವಿಗಾಗಿ ಸಹಾಯವಾಣಿ ಸಂಪರ್ಕಿಸಲು ಸೂಚನೆ
Last Updated 19 ಏಪ್ರಿಲ್ 2020, 12:16 IST
ಅಕ್ಷರ ಗಾತ್ರ

ಅಬುದಾಬಿ: ಯುಎಯಿಯಲ್ಲಿರುವ ಭಾರತೀಯರಲ್ಲಿ ಕೊರೊನಾ ವೈರಸ್ ಸೋಂಕು (ಕೋವಿಡ್‌–19) ದೃಢಪಟ್ಟರೆ, ಅವರನ್ನು ಪ್ರತ್ಯೇಕವಾಗಿರಿಸುವ ಸಂಬಂಧ ಪರ್ಯಾಯ ವಸತಿ ಕಲ್ಪಿಸಲು ಭಾರತದ ರಾಯಭಾರ ಕಚೇರಿ ಮುಂದಾಗಿದೆ.

‘ಸಾಕಷ್ಟು ಸಂಖ್ಯೆಯ ಭಾರತೀಯರು ಇಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಯಾರಿಗಾದರೂ ಕೋವಿಡ್‌–19 ಇರುವುದು ದೃಢಪಟ್ಟರೆ, ಸೋಂಕು ಇತರರಿಗೆ ಹರಡುವುದನ್ನು ತಡೆಯುವ ಸಲುವಾಗಿ ಸೋಂಕಿತರಿಗೆ ಪರ್ಯಾಯ ವ್ಯವಸ್ಥೆ ಒದಗಿಸಬೇಕಾಗುತ್ತದೆ. ಈ ಸಂಬಂಧ ಇಲ್ಲಿನ ಆರೋಗ್ಯ ಇಲಾಖೆಯೊಂದಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ’ ಎಂದು ಭಾರತದ ರಾಯಭಾರಿ ಪವನ್‌ ಕಪೂರ್‌ ಹೇಳಿರುವುದನ್ನು ಉಲ್ಲೇಖಿಸಿ ಖಲೀಜ್‌ ಟೈಮ್ಸ್‌ ವರದಿ ಮಾಡಿದೆ.

‘ಅವಿವಾಹಿತರಲ್ಲಿ ಕೆಲವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಅವರಿಗೆ ಊಟ ಅಥವಾ ಅಡುಗೆ ತಯಾರಿಸಲು ಬೇಕಾದ ಪದಾರ್ಥಗಳಿರುವ ಕಿಟ್‌ಗಳನ್ನು ಪೂರೈಕೆ ಮಾಡಲಾಗಿದೆ’ ಎಂದೂ ಅವರು ಹೇಳಿದ್ದಾರೆ.

‘ಭಾರತ ಸರ್ಕಾರ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಆರಂಭಿಸಿದ ಕೂಡಲೇ ಇಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆದೊಯ್ಯುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು’ ಎಂದೂ ಅವರು ಹೇಳಿದ್ದಾರೆ.

ನೆರವಿಗೆ ಸಂಪರ್ಕಿಸಿ

ಯುಎಇಯಲ್ಲಿರುವ ಭಾರತೀಯರು ವೈದ್ಯಕೀಯ ನೆರವು ಬೇಕಾದಲ್ಲಿ ಇ–ಮೇಲ್‌ ca.abudhabi@mea.gov.in ಹಾಗೂ ಯಾವುದೇ ತುರ್ತು ಸೇವೆ ಬೇಕಾದಲ್ಲಿ ದೂರವಾಣಿ ಸಂಖ್ಯೆ 0508995583 ಸಂಪರ್ಕಿಸಬಹುದು ಎಂದು ರಾಯಭಾರ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT